Webdunia - Bharat's app for daily news and videos

Install App

ಕಾಂಗ್ರೆಸ್‌ 25 ಸೀಟು ಗೆಲ್ಲುತ್ತದೆಯೋ ಕಾದು ನೋಡಿ:ಸಿಎಂಗೆ ಕುಮಾರಸ್ವಾಮಿ ಟಾಂಗ್

Webdunia
ಮಂಗಳವಾರ, 3 ಏಪ್ರಿಲ್ 2018 (13:04 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕೇವಲ 25 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಬಹುದು ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮೊದ್ಲು ಕಾಂಗ್ರೆಸ್ 25 ಸೀಟುಗಳಲ್ಲಿ ಜಯಗಳಿಸುತ್ತದೆಯೋ ಕಾದು ನೋಡಿ ಎಂದು ತಿರುಗೇಟು ನೀಡಿದ್ದಾರೆ. 
ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿ ಸಿದ್ದರಾಮಯ್ಯ ಸ್ಥಿತಿಯೇ ಹೀನಾಯವಾಗಿದೆ. ಮೈಸೂರಿನಲ್ಲೆ 5 ದಿನಗಳಿಂದ ಟಿಕಾಣಿ ಹೂಡುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.
 
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಕಳೆದ ಬಾರಿಯೇ ಗೆಲ್ಲಬೇಕಿತ್ತು. ನಾನು ತೆಗೆದುಕೊಂಡ ಆಂತರಿಕ ತಪ್ಪು ನಿರ್ಧಾರದಿಂದ ಕಳೆದ ಬಾರಿ ಚುನಾವಣೆ ಸೋತೆವು. ಸಾಲಮನ್ನ ಮಾಡ್ತಿವಿ ಅಂತ ಸರ್ಕಾರ ರೈತರಿಗೆ ಟೋಪಿ ಹಾಕೋ ಕೆಲಸ ಮಾಡಿದೆ. ಮೂಂದಿನ ಜೂನ್ ಗೆ ಉಳಿದ ಹಣ ಕೊಡ್ತಿವಿ ಅಂತಾರೆ
ಮುಂದೆ ಹಣ ಕೊಡೊಕೆ ಇವ್ರೇ ಗೂಟ ಹೊಡ್ಕೊಂಡು ಕೂತಿರ್ತಾರ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ರಾಜಕೀಯ ಶಕ್ತಿ ದುರುಪಯೋಗ ಮಾಡುವ ಕೆಲಸವನ್ನ ರಾಮನಗರದಲ್ಲಿ ಮಾಡಿಲ್ಲ. ರಾಮನಗರದಲ್ಲಿ ಜನ 50ಸಾವಿರ ಮುನ್ನಡೆ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದು ದೇವೇಗೌಡರ ಮಡಿಲಿಗೆ ಸೇರಿಸೊದು ನನ್ನ ಮುಂದಿನ ಗುರಿಯಾಗಿದೆ ಎಂದರು. 
 
ನಮ್ಮ ಪಕ್ಷವನ್ನ ಕುಟುಂಬ ಪಕ್ಷ ಅಂತಾರೆ. ಆದ್ರೆ ಸಿಎಮ್ ಸಿದ್ದರಾಮಯ್ಯ ಮಗ ಏನು ಮಾಡಿದಾರೆ ಅಂತ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಯಡಿಯೂರಪ್ಪ ಪುತ್ರ ಏನು ಮಾಡಿದ್ದಾರೆ ಅಂತ ಮೈಸೂರಲ್ಲಿ ಸ್ಪರ್ಧಿಸಲು ಬಂದಿದ್ದಾರೆ. ಅವ್ರು ಮಾಡ್ತಿರೊದು ಕುಟುಂಬ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
 
ಕುಮಾರಸ್ವಾಮಿಯಿಂದ ದೇವೇಗೌಡರ ರಾಜಕೀಯಕ್ಕೆ ಪೆಟ್ಟು ಬಿತ್ತು ಅನ್ನೊ ಕೂಗು ಕೇಳಿಬಂದಿದೆ  ಅದನ್ನ ನಿವಾರಿಸಲು ಪ್ರಯತ್ನ ಮಾಡುವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments