ಕಠಿಣ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ

Webdunia
ಭಾನುವಾರ, 17 ಸೆಪ್ಟಂಬರ್ 2023 (10:37 IST)
ಡ್ರಗ್ಸ್ ಪಿಡುಗನ್ನು ನಿರ್ಣಾಮ ಮಾಡುವ ಪಣ ತೊಟ್ಟಿರುವ ಪೊಲೀಸ್ ಇಲಾಖೆಯು ಇದೀಗ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ. ಸಿನಿಮಾಗಳಲ್ಲಿ ಮಾದಕ ವಸ್ತುಗಳನ್ನು ಪ್ರಚೋದಿಸುವ ದೃಶ್ಯಗಳು ಇದ್ದರೆ, ಅಂತಹ ಸಿನಿಮಾಗಳಿಗೆ ನೋಟಿಸ್ ನೀಡಲಾಗುವುದು ಎಂದು ಹೈದರಾಬಾದ್ ಪೊಲೀಸ್ ತಿಳಿಸಿದ್ದಾರೆ.
 
ಹೈದರಾಬಾದ್ ಪೊಲೀಸರು ಇತ್ತೀಚೆಗಷ್ಟೇ ಮಾದಾಪುರದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಿನಿಮಾ ನಿರ್ಮಾಪಕರು ಬಂಧನಕ್ಕೊಳಗಾಗಿದ್ದರು. ಅಲ್ಲದೇ, ಸಿನಿಮಾ ರಂಗದಲ್ಲಿ ಡ್ರಗ್ಸ್ ವೈಹಿವಾಟು ಜೋರಾಗಿದೆ ಎನ್ನುವ ಆರೋಪ ಕೂಡ ಇದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್, ‘ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ತೋರಿಸಿದರೆ ನೋಟಿಸ್ ನೀಡಿ, ಕಠಿಣ ಕ್ರಮಕ್ಕೆ ಮುಂದಾಗಲಾಗುವುದು’ ಎಂದಿದ್ದಾರೆ.

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಯ್ ದೇವರಕೊಂಡ ಅವರ ಸಹೋದರನ ‘ಬೇಬಿ’ ಚಿತ್ರ ತಂಡಕ್ಕೆ ನೋಟಿಸ್ ಕೂಡ ನೀಡಲಾಗಿದೆಯಂತೆ. ಈ ಸಿನಿಮಾದಲ್ಲಿ ಡ್ರಗ್ಸ್ ಬಳಕೆ ಕುರಿತಾಗಿ ದೃಶ್ಯವಿದೆ. ಅದರಿಂದ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ನೋಟಿಸ್ ನೀಡಲಾಗಿದೆ. ಸಿನಿಮಾ ಪರಿಶೀಲನೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಮೇಲೆ ಮುಗಿಬಿದ್ದ ಅಫ್ಗನ್: ಗುಂಡಿನ ಕಾಳಗದಲ್ಲಿ 58 ಸೈನಿಕರ ಹತ್ಯೆ

ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರಲು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯ

ಆರ್‌ಎಸ್‌ಎಸ್‌ ಸಮವಸ್ತ್ರದಲ್ಲೇ ಧರಣಿ ಕುಳಿತ ಶಾಸಕ ಮುನಿರತ್ನ: ತಿರುಗೇಟು ನೀಡಿದ ಡಿಕೆಶಿ

ಕರೆಮ್ಮ ಜಿ. ನಾಯಕ್ ಕಾರು ಭೀಕರ ಅಪಘಾತ: ದೇವದುರ್ಗ ಶಾಸಕಿ ಪ್ರಾಣಾಪಾಯದಿಂದ ಪಾರು

ಅಫ್ಗಾನಿಸ್ತಾನ ಸಚಿವರ ಸುದ್ದಿಗೋಷ್ಠಿಗೆ ಪತ್ರಕರ್ತೆಯರಿಗೆ ನಿರ್ಬಂಧ: ಮೋದಿ ವಿರುದ್ಧ ಮುಗಿಬಿದ್ದ ವಿಪಕ್ಷ ನಾಯಕರು

ಮುಂದಿನ ಸುದ್ದಿ