Daily Horoscope
✕

ಶೀಘ್ರದಲ್ಲೇ ವಿವಾಹ ಪ್ರಮಾಣಪತ್ರ ಆನ್​ ಲೈನ್​ನಲ್ಲಿ ಲಭ್ಯ

Webdunia
ಶುಕ್ರವಾರ, 21 ಜುಲೈ 2023 (17:07 IST)
ಬೆಂಗಳೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆ ಶೀಘ್ರದಲ್ಲೇ ಹಿಂದೂ ವಿವಾಹ ಪ್ರಮಾಣಪತ್ರವನ್ನು ಆನ್ಲೈನ್ನಲ್ಲಿ ವಿತರಿಸಲಾಗುವುದು ಎಂದು ವರದಿಯಾಗಿದೆ. ಸದ್ಯ ಈ ಪ್ರಕ್ರಿಯೆ ನಡೆಯುತ್ತಿದೆ.
 
ಆನ್ ಲೈನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರೀಕ್ಷಿಸಿ ಸಿದ್ಧಗೊಳಿಸಲಾಗಿದೆ. ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿ ಬಿಆರ್ ಮಮತಾ ತಿಳಿಸಿದ್ದಾರೆ.

ಪ್ರಸ್ತುತ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಥವಾ ಆನ್ ಲೈನ್ನಲ್ಲಿ ಲಭ್ಯವಿರುವ ‘ಮೆಮೊರಾಂಡಮ್ ಆಫ್ ಮ್ಯಾರೇಜ್’ ಫಾರ್ಮ್ ಅನ್ನು 15 ರೂ.ಗಳ ಶುಲ್ಕ ನೀಡಿ ಭರ್ತಿ ಮಾಡಬೇಕು. ವಧು ಮತ್ತು ವರರು ಹೆಸರು, ವಯಸ್ಸು, ಪ್ರಸ್ತುತ ವೈವಾಹಿಕ ಸ್ಥಿತಿ, ವಿವಾಹದ ದಿನಾಂಕ, ನಿವಾಸ ವಿಳಾಸ, ವಿವಾಹದ ಸ್ಥಳ, ಸಹಿ ಮತ್ತು ಮೂವರು ಸಾಕ್ಷಿಗಳ ಬಗ್ಗೆ ಮಾಹಿತಿ ಒದಗಿಸಬೇಕು.

ಮದುವೆಯ ಸಮಯದಲ್ಲಿ ತೆಗೆದ ಫೋಟೋ ಮತ್ತು ಆಮಂತ್ರಣ ಪತ್ರಿಕೆಯನ್ನು ಸಹ ಸಲ್ಲಿಸಬೇಕು. ಪ್ರಮಾಣಪತ್ರಕ್ಕೆ ಸಬ್ ರಿಜಿಸ್ಟ್ರಾರ್ ಸಹಿ ಮಾಡುತ್ತಾರೆ. ಇದೆಲ್ಲವೂ ಸುಮಾರು ಅರ್ಧ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದೆಲ್ಲವೂ ಇನ್ನು ಮುಂದೆ ಆನ್ ಲೈನ್ನಲ್ಲಿ ಲಭ್ಯವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನಕ್ಕೆ ಕುಮ್ಮಕ್ಕು; ಅರ್ಜಿ ನಮೂನೆ 7ರ ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್

ಎಸ್‌ಐಆರ್ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ

ಬಸ್ ಪ್ರಯಾಣ ದರದ ವಿರುದ್ಧ ಭಿಕ್ಷೆ ಪಾತ್ರೆ ಹಿಡಿದು ಪ್ರತಿಭಟನೆ ಮಾಡಿದ ಬಿಜೆಪಿ

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಬೆಂಗಳೂರು ಹಾಗೂ ಕರ್ನಾಟಕದಲ್ಲಿ 22 ಮತ್ತು 24 ಕ್ಯಾರಟ್ ಬಂಗಾರದ ಬೆಲೆ ಎಷ್ಟಿದೆ

ಹೌದಪ್ಪಾ ನಾನು ಹಳ‍್ಳಿ ಗುಗ್ಗು, ರೈತರ ಮಗ.. ಪ್ರಿಯಾಂಕ್ ಖರ್ಗೆಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು

ಮುಂದಿನ ಸುದ್ದಿ
Show comments