ಆಂಧ್ರ ಪ್ರದೇಶ : ಕಲ್ಪನಾ ಚಾವ್ಲಾ ಬಳಿಕ ಮತ್ತೊಬ್ಬ ಭಾರತೀಯ ಮೂಲಕ ಮಹಿಳಾ ಗಗನಯಾತ್ರಿ ಅಂತರಿಕ್ಷ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಶಾ ಬಾಂಡ್ಲಾ ಈಗ ಅಂತರಿಕ್ಷ ಯಾನಕ್ಕೆ ಮುಂದಾಗಿರುವ ಭಾರತ ಮೂಲದ ಎರಡನೇ ಮಹಿಳೆಯಾಗಿದ್ದು, ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ನಾಲ್ಕನೇ ಮಹಿಳಾ ಗಗನಯಾತ್ರಿ ಕೂಡ ಇವರಾಗಿದ್ದಾರೆ. ವರ್ಜಿನ್ ಗೆಲಾಕ್ಟಿಕ್ ಯ ವಿಎಸ್ಎಸ್ ಯೂನಿಟಿ ಬಾಹ್ಯಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಆರು ಜನರಲ್ಲಿ ಸಿರಿಶಾ ಕೂಡ ಒಬ್ಬರಾಗಿದ್ದಾರೆ. ಇದೇ ಜು. 11 ರಂದು ನ್ಯೂ ಮೆಕ್ಸಿಕೊದಿಂದ ಈ ಗಗನಯಾತ್ರಿಗಳು ನಭಕ್ಕೆ ಜಿಗಿಯಲಿದ್ದಾರೆ. ಬಿಲಿಯನಿಯರ್ ರಿಚರ್ಡ್ ಬ್ರೋನ್ಸನ್ ಕೂಡ ಈ ಬಾಹ್ಯಕಾಶ ಪ್ರಯಾಣದಲ್ಲಿ ಜೊತೆಯಾಗಲಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಏರೋನಾಟಿಕಲ್ ಇಂಜಿನಿಯರ್ ಪದವೀಧರೆಯಾಗಿರುವ 34 ವರ್ಷದ ಸಿರಿಶಾ ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ತಮಗೆ ಈ ಅವಕಾಶ ಸಿಕ್ಕಿರುವುದು ಅದ್ಭುತ ಗೌರವ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ವರ್ಜಿನ್ ಗೆಲಾಕ್ಟಿಕ್ ಕೂಡ ಬಾಹ್ಯಕಾಶಕ್ಕೆ ಪ್ರಯಾಣಿಸಲಿರುವ ಆರು ಜನ ಫೋಟೋ ಹಂಚಿಕೊಂಡಿದ್ದು, ಶುಭ ಹಾರೈಸಿದೆ.