ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಈ ಹಿನ್ನೆಲೆ ಹಲವು ಸ್ಥಳಗಳಿಗೆ ಹಾಕಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಪ್ರಮುಖ ಪ್ರವಾಸಿ ಸ್ಥಳಗಳು ಹಾಗೂ ದೇಗುಲಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಹೌದು. ಕಡಲತೀರದಲ್ಲಿ ನಿರ್ಬಂಧ ಹಾಕಲಾಗಿತ್ತು. ಇತ್ತ ಜುಲೈನಲ್ಲಿ ಪ್ರವಾಸಕ್ಕೆ ಬರಬೇಡಿ ಅಂತ ಚಿಕ್ಕಮಗಳೂರು ಡಿಸಿ ಮನವಿ ಮಾಡಿಕೊಂಡಿದ್ದರು. ಶಿವಮೊಗ್ಗದ ಕೊಡಚಾದ್ರಿ ಬೆಟ್ಟ ಕೂಡ ಪ್ರವಾಸಿಗರಿಗೆ ಮುಕ್ತವಾಗಿದೆ. ಇನ್ನು ಪ್ರಧಾನಿ ಭೇಟಿ ಬಳಿಕ ಬಂಡೀಪುರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಇಷ್ಟು ಮಾತ್ರವಲ್ಲದೆ ಶಕ್ತಿ ಯೋಜನೆಯಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಆಷಾಢ ಮುಗಿದು ಶ್ರಾವಣ ಆರಂಭವಾಗಿದ್ದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಶಕ್ತಿ ಯೋಜನೆಯಿಂದಾಗಿ ಯಾವ ದೇಗುಲಕ್ಕೆ ಎಷ್ಟು ಆದಾಯ ಬಂದಿದೆ ಎಂಬುದನ್ನು ಡೀಟೈಲ್ ಆಗಿ ಇಲ್ಲಿ ನೀಡಲಾಗಿದೆ.