ಮಾಸ್ಕೋ : ರಷ್ಯಾಪಡೆಗಳು ಉಕ್ರೇನಿನ ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಏಕಾ-ಏಕಿ 100 ಕ್ಷಿಪಣಿಗಳನ್ನು ಉಡಾಯಿಸಿವೆ.
ಇದರಿಂದ ಉಕ್ರೇನಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ಅಕ್ಟೋಬರ್ 10 ಅಂದು ನಡೆಸಿದ ದಾಳಿಗಿಂತಲೂ ಮಾರಕವಾಗಿದೆ ಎಂದು ವಾಯುಪಡೆಯ ವಕ್ತಾರ ಯೂರಿ ಇಗ್ನಾಟ್ ಉಕ್ರೇನಿಯನ್ ತಿಳಿಸಿದ್ದಾರೆ.
ರಷ್ಯಾ ಪಡೆಗಳು ಉಕ್ರೇನಿನ ನಿರ್ಣಾಯಕ ಮೂಲ ಸೌರ್ಯಕಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಅಲ್ಲದೇ ಉಕ್ರೇನಿನ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿದೆ. ನಿಖರ ಮಾಹಿತಿಯನ್ನು ಉಕ್ರೇನ್ ಸೇನೆ ಅಥವಾ ರಕ್ಷಣಾಲಯ ಸ್ಪಷ್ಟಪಡಿಸಬೇಕಿದೆ.