ಧಾರವಾಡ : ಮೇ 11ಕ್ಕೆ ಸಂಜೆ ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ ಎಂದು ಸಭಾಪತಿ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರುವುದು ಇಲ್ಲಿಯವರೆಗೂ ಯಾವುದೇ ಅಧಿಕೃತವಾಗಿಲ್ಲ. ಭಾರತ ಸರ್ಕಾರದ ಗೃಹ ಮಂತ್ರಿಗಳನ್ನ ಭೇಟಿಯಾಗಿದ್ದೆನೆ.
ಮಾತುಕತೆಗಳು ಸಹಜವಾಗಿ ಬರುತ್ತವೆ, ಸಭಾಪತಿ ಆಗಿರುವುದರಿಂದ ಬೇರೆ ಪಕ್ಷದ ಬಗ್ಗೆ ಮಾತಾಡಲು ಬರಲ್ಲ. ಮೇ11 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ನೀಡಿ ಮುಂದಿನ ನಡೆ ತಿಳಿಸುತ್ತೆನೆ ಎಂದರು.
ಅಮಿತ್ ಶಾ ಅವರು ನನ್ನ ಬಗ್ಗೆ ಕೇಳಿದ್ದರು, ಒಳ್ಳೆ ಹೆಸರು ಇಟ್ಟುಕೊಂಡಿದ್ದೀರಿ ಎಂದು ಹೇಳಿದರು. ಅವರನ್ನು ಭೇಟಿಯಾಗಿದ್ದು ಖುಷಿಯಾಗಿದೆ ಎಂದು ತಿಳಿಸಿದರು.