Webdunia - Bharat's app for daily news and videos

Install App

ಲೋಕಸಭಾ ಸ್ಥಾನ 1,000ಕ್ಕೆ ಹೆಚ್ಚಳಕ್ಕೆ ಸಿದ್ಧತೆ?

Webdunia
ಮಂಗಳವಾರ, 27 ಜುಲೈ 2021 (08:55 IST)
ನವದೆಹಲಿ(ಜು.27): 2024ರ ಲೋಕಸಭಾ ಚುನಾವಣೆಗೂ ಮುನ್ನ ದೇಶದಲ್ಲಿನ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಹಾಲಿ ಇರುವ 543ರಿಂದ 1000ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇಂಥದ್ದೊಂದು ಯೋಜನೆ ಜಾರಿಗೂ ಮುನ್ನ ಈ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಯ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.

* ಲೋಕಸಭಾ ಸ್ಥಾನ 1,000ಕ್ಕೆ ಹೆಚ್ಚಳಕ್ಕೆ ಸಿದ್ಧತೆ?
* 2024ರ ಲೋಕಸಭಾ ಚುನಾವಣೆಗೂ ಮುನ್ನ ಈ ಕ್ರಮ
* ಆದರೆ ಈ ಬಗ್ಗೆ ಚರ್ಚೆ ನಡೆಯಬೇಕು: ಕಾಂಗ್ರೆಸ್ ಆಗ್ರಹ

ಈ ಕುರಿತು ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ್ ಮನೀಶ್ ತಿವಾರಿ, ‘ಬಿಜೆಪಿಯಲ್ಲಿರುವ ನನ್ನ ಮಿತ್ರರೇ ನೀಡಿರುವ ಖಚಿತಪಡಿಸಿದ್ದಾರೆ. ಹೊಸ ಸಂಸತ್ ಭವನದಲ್ಲಿನ ಲೋಕಸಭಾ ಹಾಲ್ ಕೂಡಾ 1000 ಜನರಿಗೆ ಅವಕಾಶ ಇರುವಂತೆಯೇ ನಿರ್ಮಿಸಲಾಗುತ್ತಿದೆ. ಇಂಥ ಬದಲಾವಣೆ ಸಾಕಷ್ಟುಪರಿಣಾಮಗಳನ್ನು ಹೊಂದಿರುವ ಕಾರಣ ಈ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಮಟ್ಟದ ಚರ್ಚೆ ನಡೆಯಬೇಕಾದ ಅವಶ್ಯಕತೆ ಇದೆ’ ಎಂದಿದ್ದಾರೆ.
‘ಸ್ಥಾನ ಹೆಚ್ಚಿಸುವ ವೇಳೆ ಮಹಿಳೆಯರಿಗೆ ಶೇ.33ರಷ್ಟುಮೀಸಲು ನೀಡುವುದು ಸೇರಿದೆಯೋ ಇಲ್ಲವೋ ಗೊತ್ತಿಲ್ಲ. ಜೊತೆಗೆ 1000 ಸದಸ್ಯರಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗವೇ ಏಕೆ? ಅದಕ್ಕಿಂತ ಹೆಚ್ಚು ಏಕಿಲ್ಲ? ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಶೇ.50ರಷ್ಟುಇರುವಾಗ ಅವರಿಗೆ ಹೆಚ್ಚಿನ ಸ್ಥಾನ ನೀಡದೇ ಇರುವುದು ಸಾಕಷ್ಟುಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದು ತಿವಾರಿ ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡಾ ಲೋಕಸಭಾ ಸ್ಥಾನವನ್ನು 1000ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದರು. ಜೊತೆಗೆ ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯ ಸ್ಥಾನಗಳ ಹೆಚ್ಚಳಕ್ಕೂ ಒಲವು ವ್ಯಕ್ತಪಡಿಸಿದ್ದರು. ಬ್ರಿಟಿಷರು 650, ಕೆನಡಾದವರು 443, ಅಮೆರಿಕನ್ನರು 535 ಸ್ಥಾನ ಹೊಂದಿದ್ದರೆ ನಾವೇಕೆ 1000 ಸ್ಥಾನ ಹೊಂದಲಾಗದು? 1977ರಲ್ಲಿ ದೇಶದ ಜನಸಂಖ್ಯೆ 55 ಕೋಟಿ ಇತ್ತು. ಇದೀಗ 130 ಕೋಟಿ ಆಗಿದೆ. ಈಗಿರುವ ನಿರ್ಬಂಧದ ಪ್ರಕಾರ 2026ರವರೆಗೂ ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳ ಸ್ಥಾನ ಹೆಚ್ಚಳ ಮಾಡುವಂತಿಲ್ಲ. ಆದರೆ 2011ರ ಜನಗಣತಿ ವರದಿ ಆಧಾರದಲ್ಲೇ ನೋಡುವುದಾದರೆ ಲೋಕಸಭಾ ಸ್ಥಾನ ಹೆಚ್ಚಳವಾಗಲೇ ಬೇಕು ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು.
ಹಾಲಿ ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಈ ಪೈಕಿ 530 ಜನರು ರಾಜ್ಯಗಳಿಂದ, ಉಳಿದವರು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments