ಭಾರತ-ಪಾಕಿಸ್ತಾನ ವಿಭಜನೆಯಾದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಎರಡೂ ದೇಶಗಳು ಕಿತ್ತಾಡಿಕೊಂಡಿರುವ ಸುದ್ದಿಗಳೇ ಹೆಚ್ಚು.
ಹಿಂದೂ ಮುಸ್ಲಿಂ ವಿವಾದವೂ ಇದಕ್ಕೆ ಹೊರತಲ್ಲ. ಇದೀಗ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಭಾರತದ ವಿದೇಶಾಂಗ ನೀತಿಯನ್ನು ಹೊಗಳಿ ಭಾರೀ ಸುದ್ದಿಯಾಗಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಭಾರತೀಯ ವಿದೇಶಾಂಗ ನೀತಿ ತನ್ನ ದೇಶದ ಪ್ರಜೆಗಳ ಒಳಿತನ್ನೇ ಮಾಡುತ್ತಿದೆ ಎಂದಿದ್ದಾರೆ.
ಇಂದು ನಾನು ಭಾರತವನ್ನು ಗೌರವಿಸುತ್ತಿದ್ದೇನೆ. ಭಾರತ ಇಂದಿಗೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಉಳಿಸಿಕೊಂಡಿದೆ.
ಕ್ವಾಡ್ ಮೈತ್ರಿಕೂಟದ ಸದಸ್ಯ ರಾಷ್ಟ್ರ ಹಾಗೂ ಅಮೆರಿಕ ಅದರ ಸದಸ್ಯ ರಾಷ್ಟ್ರವಾಗಿಯೂ ಭಾರತ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಏಕೆಂದರೆ ಭಾರತದ ವಿದೇಶಾಂಗ ನೀತಿ ತನ್ನ ಪ್ರಜೆಗಳ ಪರವಾಗಿದೆ ಎಂದು ಹೊಗಳಿದ್ದಾರೆ.