ಫ್ಲೈಓವರ್ ಸಂಚಾರಕ್ಕೆ ಮುಕ್ತ

Webdunia
ಗುರುವಾರ, 17 ಫೆಬ್ರವರಿ 2022 (06:40 IST)
ಬೆಂಗಳೂರು : 57 ದಿನಗಳ ಬಳಿಕ ಗೊರಗುಂಟೆ ಪಾಳ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತವಾಗಿದೆ.

ಆದರೆ, ಲಘುವಾಹನಗಳಿಗೆ ಮಾತ್ರ ಅವಕಾಶ ಕೊಟ್ಟಿದ್ದು, ಭಾರೀ ತೂಕದ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ರಾಜಧಾನಿ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕದ 21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಯೇ ಕಳಪೆ ಆಗಿದೆ ಅನ್ನೋದು ಜಾಹೀರಾಗಿದೆ.

ಜೊತೆಗೆ, ಸರ್ಕಾರಗಳ ಬೇಜವಾಬ್ದಾರಿಯನ್ನೂ ಬಹಿರಂಗಗೊಳಿಸಿದೆ. ಸುಮಾರು 4.5 ಕಿ.ಮೀ. ಉದ್ದದ ಶಿವಕುಮಾರ್ ಸ್ವಾಮೀಜಿಗಳ ಫ್ಲೈಓವರ್ ಅನ್ನು ಧ್ವಂಸ ಮಾಡಬೇಕು ಎಂದು ತಜ್ಞರು ಹೇಳ್ತಿದ್ದಾರೆ. ಉದ್ಘಾಟನೆಗೊಂಡ 12 ವರ್ಷಕ್ಕೆ ಧರಾಶಾಹಿ ಆಗುತ್ತಾ ಅನ್ನೋದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. 

ಪೀಣ್ಯ ಪ್ಲೈ ಓವರ್ ಸಂಚಾರಕ್ಕೆ ಸುರಕ್ಷಿತವಾಗಿಲ್ಲ. ಲೋಡ್ ಟೆಸ್ಟಿಂಗ್ ನಲ್ಲಿ ಸಂಚಾರಕ್ಕೆ ಸುರಕ್ಷಿತವಾಗಿಲ್ಲ ಎಂದು ತಿಳಿದು ಬಂದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೀಣ್ಯ ಮೇಲ್ಸೇತುವೆಯನ್ನ ನಿರ್ಮಿಸಿತ್ತು.

4.5 ಕೀ.ಮೀ ಉದ್ದದ ಈ ಮೇಲ್ಸೇತುವೆಗೆ ಆದ ವೆಚ್ಚ775..70ಕೋಟಿ ರೂ.ಗಳು ಆಗಿತ್ತು. ಫ್ಲೈಓವರ್ ದುರಸ್ಥಿಯ ಬಗ್ಗೆ ವರದಿ ನೀಡಿದ್ದ ಭಾರತೀಯ ವಿಜ್ಞಾನ ಸಂಸ್ಥೆ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ವರದಿಯಲ್ಲಿ ತಿಳಿಸಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ-ಯುಎಸ್ ದಾಳಿ, ಸಾವನ್ನಪ್ಪಿದವರ ಸಂಖ್ಯೆ ಕೇಳಿದ್ರೆ ಶಾಕ್‌

ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 20 ಸಾವು

ಮೆಜೆಸ್ಟಿಕ್‌ನಿಂದ ಕತ್ರಿಗುಪ್ಪೆಗೆ ₹700, ಆಟೋ ಚಾಲಕರ ಡಿಮ್ಯಾಂಡ್‌ಗೆ ಮಹಿಳೆ ಖಡಕ್ ಕೌಂಟರ್‌, Video

ಇರಾನ್ ಮೇಲೆ ಇಸ್ರೇಲ್, ಯುಎಸ್‌ ದಾಳಿ ಬೆನ್ನಲ್ಲೇ ಟೆಹ್ರಾನ್‌ನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ

ರಸ್ತೆಯಲ್ಲಿ ಚೆಲ್ಲಿದ ಮದ್ಯವನ್ನು ನೋಡಕ್ಕಾಗದೆ ಕುಡುಕನೊಬ್ಬ ಏನ್ ಮಾಡಿದ ನೋಡಿ, Video

ಮುಂದಿನ ಸುದ್ದಿ
Show comments