Webdunia - Bharat's app for daily news and videos

Install App

ನವಜಾತ ಮಕ್ಕಳೂ ಟಾರ್ಗೆಟ್!

Webdunia
ಮಂಗಳವಾರ, 3 ಆಗಸ್ಟ್ 2021 (15:22 IST)
ವಾಷಿಂಗ್ಟನ್(ಆ. 03): ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಮಧ್ಯೆ, ಅಮೆರಿಕದಲ್ಲಿ ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RS ) ನಿಂದ ಹೊಸ ಸಮಸ್ಯೆ ತಲೆದೋರಿದೆ. ಈ ಸಾಂಕ್ರಾಮಿಕ ರೋಗವು ಕಳೆದ 2 ವಾರಗಳಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಾಣಲಾರಂಭಿಸಿದೆ.

* ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಮಧ್ಯೆಮತ್ತೊಂದು ಆತಂಕ
* ಅಮೆರಿಕದಲ್ಲಿ ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RS ) ನಿಂದ ಹೊಸ ಸಮಸ್ಯೆ
* ಕಳೆದ 2 ವಾರಗಳಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಾಣಿಸುತ್ತಿದೆ ಈ ಸಮಸ್ಯೆ
ಇನ್ನು ಕೊರೋನಾದ ಡೆಲ್ಟಾ ರೂಪಾಂತರಿ ವೈರಸ್ಗಳ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಯುಎಸ್ ಆರೋಗ್ಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು,  ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದರೆ ಏನು ಮಾಡುವುದು ಎಂಬ ಬಗ್ಗೆ ತಜ್ಞರೂ ಚಿಂತೆ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಈ ಬಗೆಗಿನ ಅಂಕಿ ಅಂಶಗಳನ್ನು ಮುಂದಿಟ್ಟು, ಜೂನ್ ತಿಂಗಳಲ್ಲಿ ಆರ್ಎಸ್ವಿ ಪ್ರಕರಣಗಳು ಕ್ರಮೇಣ ಹೆಚ್ಚಾಗಿದೆ, ಕಳೆದ ತಿಂಗಳಿಗಿಂತ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದಿದೆ. ಆರ್ಎಸ್ವಿ ದಾಳಿ ಇಟ್ಟರೆ ಮೂಗು ಸ್ರವಿಸುವಿಕೆ, ಕೆಮ್ಮು, ಸೀನುವಿಕೆ ಮತ್ತು ಜ್ವರದಂತಹ ಲಕ್ಷಣಗಳನ್ನು ಕಾಣಬಹುದು. ಹೂಸ್ಟನ್ನ ಟೆಕ್ಸಾಸ್ ಚಿಲ್ಡ್ರನ್ಸ್ ಹಾಸ್ಪಿಟಲ್ನ ಶಿಶುವೈದ್ಯೆ ಹೀದರ್ ಹಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಹಲವಾರು ತಿಂಗಳುಗಳ ಶೂನ್ಯ ಹಾಗೂ ಕೆಲವೇ ಮಕ್ಕಳಲ್ಲಿ ಈ ಸೋಂಕು ಕಂಡು ಬರುತ್ತಿತ್ತು. ಈಗ ನವಜಾತ ಶಿಶುಗಳು, ಮಕ್ಕಳು ಮತ್ತು ಹದಿಹರೆಯದವರು ಕೋವಿಡ್ ನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ನ ಮಾಹಿತಿಯ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಅಮೆರಿಕದಲ್ಲಿ ಹೊಸ ಕೊರೋನವೈರಸ್ ಸೋಂಕಿನ ಪ್ರಕರಣಗಳು ಶೇ 148 ರಷ್ಟು ಹೆಚ್ಚಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ 73 ರಷ್ಟು ಹೆಚ್ಚಾಗಿದೆ. ಡೆಲ್ಟಾ ರೂಪಾಂತರಿಯೇ ಇದಕ್ಕೆ ಕಾರಣವೆನ್ನಲಾಗಿದೆ. ಇದರೊಂದಿಗೆ, ಅನೇಕ ರಾಜ್ಯಗಳಲ್ಲಿ ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
ಭಾರತದಲ್ಲಿ ಮಕ್ಕಳ ಲಸಿಕೆ ಹಾಕುವ ಪ್ರಕ್ರಿಯೆ ಎಲ್ಲಿ ತಲುಪಿದೆ?
ಭಾರತದಲ್ಲಿ ಸಾಧ್ಯವಾದಷ್ಟು ಬೇಗ ಮಕ್ಕಳಿಗೆ ಲಸಿಕೆ ಹಾಕಲು ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ವರದಿಗಳ ಪ್ರಕಾರ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮುಂದಿನ ತಿಂಗಳಿನಿಂದ ಮಕ್ಕಳಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಆರಂಭಿಸಬಹುದು ಎಂದು ಹೇಳಿದ್ದರು. ತಜ್ಞರ ಪ್ರಕಾರ, ಸೋಂಕಿನ ಸರಪಳಿಯನ್ನು ನಿಲ್ಲಿಸಲು ಮತ್ತು ಮತ್ತೆ ಶಾಲೆಯನ್ನು ಪ್ರಾರಂಭಿಸಲು ಇದು ಒಂದು ದೊಡ್ಡ ಹೆಜ್ಜೆ ಎನ್ನಲಾಗಿದೆ. ಭಾರತ್ ಬಯೋಟೆಕ್ನ ಕೊವಾಕ್ಸಿನ್ ಮತ್ತು ಝೈಡಸ್ ಕ್ಯಾಡಿಲಾ ಲಸಿಕೆಗಳ ಪ್ರಯೋಗ ನಡೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments