ಹೊಸ ಆಲೋಚನೆ ಹಾಗೂ ಉದ್ಯಮಶೀಲತೆಗೆ ಉತ್ತೇಜನ ಕೊಡಲು ಶಾಲೆಗಳ ಪಠ್ಯಪುಸ್ತಕದಲ್ಲಿ ಮುಂಬರುವ ವರ್ಷದಿಂದ ಈ ವಿಷಯಗಳು ಸೇರಿಸಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಐಟಿಐ ಡಿಪ್ಲೋಮಾ ಕಾಲೇಜು ಉನ್ನತೀಕರಣ ಕೂಡ ಮಾಡುವ ಯೋಚನೆ ಇದೆ. ಶಾಲೆ ಕಾಲೇಜುಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ಚಿಂತನೆ ಅದಲ್ಲದೆ ನವ ಉದ್ಯಮಕ್ಕೆ ಭದ್ರ ಬುನಾದಿ ಹಾಕಬೇಕಾದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ತರಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ ಮುಂತಾದ ಕಡೆ, ಅತಿ ಹೆಚ್ಚು ಉದ್ಯೋಗ ಕೊಡುವ ರಂಗದಲ್ಲಿ ಸ್ಟಾರ್ಟ್ ಅಪ್ಗಳು ಬರಬೇಕು. ಅಲ್ಲಿ ಹೊಸ ಚಿಂತನೆ, ಹೊಸ ಕ್ರಾಂತಿ ಆಗಬೇಕು. ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಶಿಕ್ಷಣ, ಆರೋಗ್ಯ ವಿಭಾಗದಲ್ಲಿ ಕೂಡ ಹೆಚ್ಚಿನ ಉತ್ತೇಜನ ಕೊಡಲಾಗುತ್ತದೆ.
ಹೆಣ್ಣು ಮಕ್ಕಳು ಹಾಗೂ ಮಕ್ಕಳ ಸಂಬಂಧಿಸಿದ ಯೋಜನೆಗಳು ಅತಿಹೆಚ್ಚು ತರುವ ಮೂಲಕ ಅದನ್ನು ಬಲಪಡಿಸುವ ಆಶಯ ಇದೆ ಎಂದು ಸಿಎಂ ಬೊಮ್ಮಾಯಿ ಈ ವೇಳೆ ಮಾಹಿತಿ ನೀಡಿದ್ದಾರೆ.