ಬೆಂಗಳೂರು : ಒಟ್ಟು 129 ಪುಟಗಳ ಹೈಕೋರ್ಟ್ ತೀರ್ಪಿನಲ್ಲಿ ಹಿಜಬ್ ವಿವಾದದ ಹಿಂದೆ ಕಾಣದ ಕೈಗಳ ಕೈವಾಡವಿರುವ ಬಗ್ಗೆಯೂ ಪೂರ್ಣ ಪೀಠ ಶಂಕೆ ವ್ಯಕ್ತಪಡಿಸಿದೆ.
ಸಮಾಜದ ಸಾಮರಸ್ಯ ಕದಡುವ ಹುನ್ನಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 126 ಮತ್ತು 127ನೇ ಪುಟದಲ್ಲಿ ದಿಢೀರ್ ಆಗಿ ಈ ವಿವಾದ ಯಾಕೆ ಸೃಷ್ಟಿಯಾಯಿತು ಎಂದು ಹೈಕೋರ್ಟ್ಪ್ರಶ್ನಿಸಿದೆ.
2004ರಿಂದಲೂ ಸಮವಸ್ತ್ರ ಕಡ್ಡಾಯ ಆದೇಶವಿದ್ದು ಈ ವಿವಾದ ಇದ್ದಕ್ಕಿದ್ದಂತೆ ಚಾಲ್ತಿಗೆ ಬಂದಿದ್ಯಾಕೆ ಎಂದು ಪ್ರಶ್ನಿಸಿದೆ. ಸಮಾಜದಲ್ಲಿ ಶಾಂತಿ ಕದಡುವ ಯತ್ನದ ಬಗ್ಗೆ ಅನುಮಾನವಿದೆ.
ಕಾಣದ ಕೈಗಳ ಕೈವಾಡ ಇರುವ ಬಗ್ಗೆ ಶಂಕೆ ಇದೆ. ಇಡೀ ಪ್ರಕರಣದಲ್ಲಿ ನಮಗೆ ದಿಗ್ಬ್ರಮೆ ಆಗುತ್ತಿದೆ. ಫೆ. 5ರ ಸುತ್ತೋಲೆಗೆ ಮುನ್ನವೇ ವಿದ್ಯಾರ್ಥಿನಿಯರಿಂದ ಪಿಐಎಲ್ ಸಲ್ಲಿಕೆಯಾಗಿದೆ.