Daily Horoscope
✕

ಕರ್ನಾಟಕ ಬಂದ್ಗೆ! ಸಾ.ರಾ.ಗೋವಿಂದು ಕಿಡಿ?

Webdunia
ಶನಿವಾರ, 25 ಡಿಸೆಂಬರ್ 2021 (06:55 IST)
ಬೆಂಗಳೂರು : ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಗಳು ಏಕಾಏಕಿ ಕರೆ ಕೊಟ್ಟ ಕರ್ನಾಟಕ ಬಂದ್ಗೆ ಅಪಸ್ವರ ವ್ಯಕ್ತವಾಗುತ್ತಲೇ ಇದೆ.

ಹತ್ತು ಹಲವು ಸಂಘಟನೆಗಳು ಬಂದ್ ಪರವಾಗಿಲ್ಲ. ಕೇವಲ ನೈತಿಕ ಬೆಂಬಲ ಕೊಡುತ್ತೇವೆ ಎನ್ನುತ್ತಿವೆ. ಈ ಸಾಲಿಗೆ ಈಗ ಚಿತ್ರೋದ್ಯಮ ಕೂಡ ಸೇರಿದೆ. ಮೊನ್ನೆ ಬಂದ್ ಘೋಷಣೆ ಮಾಡಿದ್ದ ಸಾರಾ ಗೋವಿಂದು, ಚಿತ್ರೋದ್ಯಮದ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು.

ಈ ಘೋಷಣೆಗೆ ಮುನ್ನ, ಫಿಲಂ ಚೇಂಬರ್ ಜೊತೆಯಾಗಲಿ, ಚಿತ್ರೋದ್ಯಮದ ಗಣ್ಯರ ಜೊತೆ ಸಾರಾ ಗೋವಿಂದು ಚರ್ಚೆ ನಡೆಸಿರಲಿಲ್ಲ. ಈ ಬೆನ್ನಲ್ಲೇ ಇಂದು ಸಭೆ ಸೇರಿದ್ದ ಫಿಲ್ಮ್ ಚೇಂಬರ್ ಬಂದ್ನಲ್ಲಿ ಚಿತ್ರೋದ್ಯಮ ಭಾಗಿ ಆಗಲ್ಲ. ಆದರೆ ಬಂದ್ಗೆ ನೈತಿಕ ಬೆಂಬಲ ಇರಲಿದೆ. ಡಿ.31ರಂದು ಚಿತ್ರರಂಗದ ಎಲ್ಲಾ ಚಟುವಟಿಕೆ ನಡೆಯಲಿವೆ ಎಂದು ಘೋಷಿಸಿತು.

ಬಂದ್ಗೆ ಚಿತ್ರೋದ್ಯಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಒತ್ತಾಯಿಸಿ ಫಿಲ್ಮ್ ಚೇಂಬರ್ ಮುಂದೆ ನಾಳೆ ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿವೆ.

ಈ ಮಧ್ಯೆ ಮೈಸೂರಲ್ಲಿ ಮಾತನಾಡಿದ ನಟ ಶಿವಣ್ಣ, ಫಿಲಂ ಚೇಂಬರ್ ನಿರ್ಧಾರಕ್ಕೆ ನಾವು ಬದ್ಧ ಎಂದು ಘೋಷಿಸಿದ್ದಾರೆ. ಪರೋಕ್ಷವಾಗಿ ಬಂದ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಯಕರ್ನಾಟಕ ಸಂಘಟನೆ ಬಂದ್ಗೆ ನೀಡಿದ್ದ ಬೆಂಬಲ ಹಿಂಪಡೆದಿದೆ. ಈಗಾಗಲೇ, ಕರವೇ ನಾರಾಯಣಗೌಡ ಕೂಡ ಬಂದ್ಗೆ ಬೆಂಬಲ ಇಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವಂಬರ್ 1 ರ ದೆಹಲಿ ಪ್ರತಿಭಟನೆಗೆ ಹೋಗಲು ನಮಗೆ ರೈಲು ಕೊಡ್ತಿಲ್ಲ, ಅದಕ್ಕೇ ಫ್ಲೈಟ್, ಬಸ್ ನಲ್ಲಿ ಹೋಗ್ತೀವಿ: ಬಿಕೆ ಹರಿಪ್ರಸಾದ್

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಾಯಿ ಕುಸುಮಾವತಿ ಬಗ್ಗೆ ಸ್ಪೋಟಕ ಮಾಹಿತಿ

ಲಗೇಜ್ ಭಾರ ಜಾಸ್ತಿಯಾಯ್ತು ಎಂದು ಏರ್ ಪೋರ್ಟ್ ಸಿಬ್ಬಂದಿ ಹೇಳಿದ್ದಕ್ಕೆ ಮಹಿಳೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video

ಯೋಗಿ ಸರ್ಕಾರದ ಮಾಸ್ಟರ್ ಸ್ಟ್ರೋಕ್: ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದರೆ ಸರ್ಕಾರಿ ಕೆಲಸವಿಲ್ಲ

ಕಾಂಗ್ರೆಸ್ ಎಸ್ಐಆರ್ ವಿರುದ್ಧ ಪ್ರತಿಭಟನಗೆ ಮುಂದಾಗಿರುವಾಗ ಸತೀಶ್ ಜಾರಕಿಹೊಳಿ ಕರ್ನಾಟಕದಲ್ಲಿ ಎಸ್ಐಆರ್ ಸಮಸ್ಯೆಯಿಲ್ಲ ಎನ್ನೋದಾ Video

ಮುಂದಿನ ಸುದ್ದಿ
Show comments