ನವದೆಹಲಿ : ವಿಮಾನಗಳಲ್ಲಿ ಪ್ರಯಾಣಿಸುವವರು ಒಂದು ಹ್ಯಾಂಡ್ ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಬಹುದು ಎಂದು ನಾಗರಿಕ ವಿಮಾನಯಾನ ಸುರಕ್ಷತಾ ಬ್ಯೂರೋ (ಬಿಸಿಎಎಸ್) ಹೊಸ ನಿಯಮವನ್ನು ಜಾರಿಗೊಳಿಸಿದೆ.
ಒಬ್ಬ ಪ್ರಯಾಣಿಕ ಒಂದೇ ಹ್ಯಾಂಡ್ ಬ್ಯಾಗ್ ತರಬಹುದು. ಪ್ರಯಾಣಿಕರು ಒಂದಕ್ಕಿಂತ ಹೆಚ್ಚು ಬ್ಯಾಗ್ ತೆಗೆದುಕೊಂಡು ಹೋಗುವಂತಿಲ್ಲ. ಟಿಕೆಟ್ ಕೌಂಟರ್ನಲ್ಲಿ ಈ ಬಗ್ಗೆ ಮಾಹಿತಿ ಕೊಡಬೇಕು. ಏರ್ಪೋರ್ಟ್ನಲ್ಲೂ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಏರ್ಪೋರ್ಟ್ನಲ್ಲಿ ಬ್ಯಾಗ್ ಪರಿಶೀಲನೆಗೆ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಸುರಕ್ಷಿತ ದೃಷ್ಟಿಯಿಂದಲೂ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಮಹಿಳೆಯರ ಹ್ಯಾಂಡ್ ಬ್ಯಾಗ್, ಲ್ಯಾಪ್ಟಾಪ್ ಹೀಗೆ ಹಲವು ಬ್ಯಾಗ್ಗಳಿಗೆ ಮಾತ್ರ ಅನುಮತಿ ಇದೆ ಎಂದು ಬಿಸಿಎಎಸ್ ತಿಳಿಸಿದೆ.