ಕೊಡಗು ಸುತ್ತ ಮತ್ತೆ ಭೂಕಂಪನ!

Webdunia
ಭಾನುವಾರ, 26 ಜೂನ್ 2022 (13:35 IST)
ಮಡಿಕೇರಿ : ಪದೇ ಪದೇ ಭೂಕಂಪವಾಗುವ ವಿಜಯಪುರ ಮತ್ತು ಕಳೆದ ಕೆಲ ವರ್ಷಗಳಿಂದ ನಿರಂತರ ಪ್ರಕೃತಿ ವಿಕೋಪಕ್ಕೀಡಾಗುತ್ತಿರುವ ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಮತ್ತೆ ಭೂಕಂಪನವಾಗಿದ್ದು,
 
ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಜಯಪುರ ನಗರದ ಹಲವೆಡೆ ಶುಕ್ರವಾರ ರಾತ್ರಿ ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ 2.4 ತೀವ್ರತೆ ದಾಖಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೆಲವೆಡೆ ಬೆಳಗ್ಗೆ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.3 ದಾಖಲಾಗಿದೆ.

ವಿಜಯಪುರ ನಗರದ ರೈಲ್ವೆ ಸ್ಟೇಶನ್ ಪ್ರದೇಶ, ಕೀರ್ತಿನಗರ, ಅಲ್-ಅಮಿನ್ ಪ್ರದೇಶ ಸೇರಿದಂತೆ ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ 10.38ಕ್ಕೆ ಭೂಕಂಪನವಾಗಿದೆ. ಭೂಮಿ ನಡಗುತ್ತಿದ್ದಂತೆಯೇ ಭಯಂಕರ ಸದ್ದು ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ರಾತ್ರಿ 10.46ಕ್ಕೆ ಭೂಮಿ ಕಂಪನವಾಗಿದ್ದು ಜನರು ಗಾಬರಿಯಿಂದ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಮನಗೂಳಿ ಹಾಗೂ ವಿಜಯಪುರದಲ್ಲಿ ಮೂರು ತಿಂಗಳ ಹಿಂದೆಯೂ ಭೂಕಂಪನವಾಗಿತ್ತು. ಈಗ ಮತ್ತೆ ಭೂಕಂಪನವಾಗಿದ್ದು ಜನರು ಆತಂಕ ಪಡುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸಿಎಂ ಬದಲಾವಣೆಗೆ ಬಿಗ್ ಟ್ವಿಸ್ಟ್: ರಾಜೀನಾಮೆಗೆ ಸಿದ್ದರಾಮಯ್ಯ ನಿರ್ಧಾರ?

ಸದ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ: ದೆಹಲಿಗೆ ಸಿದ್ದು, ಡಿಕೆಶಿನ ಕರೆಸಿಕೊಂಡಿದ್ದು ಈ ಕಾರಣಕ್ಕೆ ಅಂತೆ

ಗಡಿ ಸುರಕ್ಷಿತವಾಗಿರುವಲ್ಲಿ ಪುರುಷರಿಗಿಂತ ಮಹಿಳೆಯರದ್ದೆ ಹೆಚ್ಚು ಪಾಲು: ಅಮಿತ್ ಶಾ ಶ್ಲಾಘನೆ

Rain Alert: ಕರಾವಳಿ ಮೀನುಗಾರರಿಗೆ ವಿಶೇಷ ಸೂಚನೆ ಕೊಟ್ಟ ಇಲಾಖೆ

FIFA ವರ್ಲ್ಡ್ ಕಪ್ 2026: ಭಾರತದಿಂದ ಆಯ್ಕೆಯಾದ ಮೊದಲ ಛಾಯಾಗ್ರಾಹಕಿ ಇವರೇ

ಮುಂದಿನ ಸುದ್ದಿ
Show comments