ಸಂಸತ್ತಿನಲ್ಲಿ ಬಜೆಟ್ ಅಧಿವೇಶನವು ಇಂದಿನಿಂದ (ಮಾರ್ಚ್ 14) ಮತ್ತೆ ಆರಂಭವಾಗಲಿದೆ.
ಬಿಜೆಪಿಯು ಐದು ರಾಜ್ಯಗಳಲ್ಲಿ ಮೇಲುಗೈ ಸಾಧಿಸಿದ ನಂತರ ನಡೆಯುತ್ತಿರುವ ಆರಂಭವಾಗುತ್ತಿರುವ ಕಲಾಪದಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಗಳಿವೆ.
ಈ ಗೆಲುವನ್ನು ಬಿಜೆಪಿಯು ಜನಪರ ಮತ್ತು ಅಭಿವೃದ್ಧಿ ಪರ ರಾಜಕಾರಣಕ್ಕೆ ಸಿಕ್ಕ ಮನ್ನಣೆ ಎಂದು ವ್ಯಾಖ್ಯಾನಿಸಿದೆ. ಸೋಲಿನ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಭಾನುವಾರ ದೆಹಲಿಯಲ್ಲಿ ಆತ್ಮಾವಲೋಕನ ಸಭೆ ಮತ್ತು ಸಂಸದೀಯ ಪಕ್ಷದ ಸಭೆ ನಡೆಸಿತು.
ಅಧಿವೇಶನದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಉಕ್ರೇನ್ ಯುದ್ಧವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿತು. ಬಜೆಟ್ ಅಧಿವೇಶನವು ಈ ಮೊದಲು ಫೆಬ್ರುವರಿ 1ರಿಂದ 11ರವರೆಗೆ ನಡೆದಿತ್ತು. ಇಂದಿನಿಂದ ಮತ್ತೆ ಅರಂಭವಾಗಲಿರುವ ಅಧಿವೇಶ.