Webdunia - Bharat's app for daily news and videos

Install App

BBMP ರಾತ್ರೋರಾತ್ರಿ ಬಜೆಟ್ ಮಂಡನೆ!

Webdunia
ಶುಕ್ರವಾರ, 1 ಏಪ್ರಿಲ್ 2022 (07:52 IST)
ಬೆಂಗಳೂರು : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾತ್ರೋರಾತ್ರಿ ಬಜೆಟ್ ಮಂಡನೆ ಮಾಡಿದೆ.

ಯಾರಿಗೂ ಮಾಹಿತಿ ನೀಡದೆ ಕದ್ದುಮುಚ್ಚಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ.

10,480 ಕೋಟಿ ಮೊತ್ತದ ಬಜೆಟ್ ಇದಾಗಿದ್ದು, ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಈ ಬಾರಿ ಬಜೆಟ್ ಮಂಡಿಸಲಾಗಿದೆ.

ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಒಟ್ಟಾರೆ ಬಜೆಟ್ನ ಶೇ.76ರಷ್ಟು ಅನುದಾನ ನಿರ್ವಹಣಾ ಶುಲ್ಕ, ಕಾಮಗಾರಿಗಳಿಗೆ ಮೀಸಲಿಡಲಾಗಿದೆ.
ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ 370 ಕೋಟಿ ರೂ., ಹಿಂದುಳಿದ ವರ್ಗಗಳ ಅಭಿವೃದ್ದಿಗೆ 346 ಕೋಟಿ ರೂ., ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ ರೂ., ಆರೋಗ್ಯ ವಲಯಕ್ಕೆ 75 ಕೋಟಿ ರೂ. ಮೀಸಲಿಡಲಾಗಿದೆ.

ಆದಾಯ ಮೂಲಗಳು

1. ತೆರಿಗೆ ಮತ್ತು ಕರಗಳ ಆದಾಯ – 368.15 (35%)
2. ತೆರಿಗೆಯೇತರ ಆದಾಯ – 2302-22 (22%)
3. ಭಾರತ ಸರ್ಕಾರ ಅನುದಾನ – 436.01 (4%)
4. ಕರ್ನಾಟಕ ಸರ್ಕಾರದ ಅನುದಾನ – 3576- 59 (34%)
5. ಅಸಾಧಾರಣ ಆದಾಯ – 489.30 (5%)
ಒಟ್ಟು – 10484.28 100%

ತಡರಾತ್ರಿ 11.24ಕ್ಕೆ ಆಯ್ಯವ್ಯಯ ಮಂಡನೆ ಆಗಿರುವ ಬಗ್ಗೆ ಪಾಲಿಕೆ ಮಾಹಿತಿ ನೀಡಿದೆ. ಬಜೆಟ್ ಮಂಡನೆ ವಿಚಾರದಲ್ಲಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಪಾಲಿಕೆ ಸೋತಿದೆ. ಸದ್ಯ ತರಾತುರಿಯಲ್ಲಿ ಹಲವು ಬಜೆಟ್ ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಮಂಡನೆ ಮಾಡಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

ರಾಹುಲ್ ಗಾಂಧಿಯ ಚುನಾವಣಾ ಅಕ್ರಮ ಪ್ರತಿಭಟನೆ ಕಪಟ ನಾಟಕ: ಬಿವೈ ವಿಜಯೇಂದ್ರ

ನನ್ನನ್ನು ನಾನು ದ್ವೇಷಿಸುತ್ತೇನೆ, ನಾನು ಸೋತವನು: ಹೀಲಿಯಂ ಅನಿಲ ಸೇವಿಸಿ ಸಿಎ ಆತ್ಮಹತ್ಯೆ

ಧರ್ಮಸ್ಥಳದಲ್ಲಿ ಎರಡನೇ ದಿನ ಹುಡುಕಾಡುತ್ತಿರುವ ಎಸ್ಐಟಿ ತಂಡಕ್ಕೆ ಸಿಕ್ಕಿದ್ದೇನು

ಮುಂದಿನ ಸುದ್ದಿ
Show comments