ಅಂಕಾರ : ಸರಣಿ ಭೂಕಂಪಗಳಿಂದ ತತ್ತರಿಸುತ್ತಿರುವ ಟರ್ಕಿ ಹಾಗೂ ಸಿರಿಯಾ ದೇಶದ ನೆರವಿಗೆ ವಿಶ್ವಬ್ಯಾಂಕ್ ಧಾವಿಸಿದ್ದು, 1.78 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ.
ಟರ್ಕಿ ಹಾಗೂ ಸಿರಿಯಾ ಮತ್ತೆ ಚೇತರಿಕೆ ಕಾಣಲು ಸಹಾಯ ಮಾಡುವ ಸಲುವಾಗಿ ವಿಶ್ವಬ್ಯಾಂಕ್ ನೆರವು ಘೋಷಣೆ ಮಾಡಿದೆ. ತಕ್ಷಣವೇ ಸಹಾಯ ಒದಗಿಸುತ್ತಿದ್ದೇವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ತಿಳಿಸಿದ್ದಾರೆ.
ಈ ಬೆನ್ನಲ್ಲೇ ಅಮೆರಿಕ ಸಹ 70.19 ಕೋಟಿ ರೂ. ನೆರವು ಘೋಷಣೆ ಮಾಡಿದೆ. ಲಕ್ಷಾಂತರ ಜನರಿಗೆ ತುರ್ತಾಗಿ ಅಗತ್ಯವಿರುವ ಆಹಾರ, ಆಶ್ರಯ, ಆರೋಗ್ಯ ಸೇವೆಗಳನ್ನು ಪೂರೈಸಲು ನೆರವು ನೀಡಲಾಗುತ್ತಿದೆ ಎಂದು ಹೇಳಿದೆ.