ಬೆಂಗಳೂರು : 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಶೇಷ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.
ಈಗಾಗಲೆ 13ನೇ ತಾರೀಖಿನಿಂದ 5 ಮತ್ತು 8 ನೇ ತರಗತಿಯ ಪರೀಕ್ಷೆ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಗಳಿಂದ ಸುತ್ತೋಲೆ ಹೋಗಿದೆ. ಏಕ ಸದಸ್ಯ ಪೀಠದ ಆದೇಶ ಪಾಲಿಸಿದರೆ ಮಕ್ಕಳಲ್ಲಿ ಅಷ್ಟೊಂದು ಗೊಂದಲವಾಗುತ್ತಿರಲಿಲ್ಲ.
ಯಾವಾಗ ಸರ್ಕಾರದ ಮೇಲ್ಮನವಿ ಹೋಯಿತೋ ಅಲ್ಲಿಂದ ಪರೀಕ್ಷೆ ಇದೆಯೋ ಇಲ್ಲವೋ ಎನ್ನುವ ಗೊಂದಲ ಉಂಟಾಗಿದೆ.