ಸಂಜು ಮತ್ತು ನಾನು ಧಾರವಾಹಿ ಕತೆ ಮುಂದೇನು? ನಿರ್ದೇಶಕರು ಏನಂತಾರೆ?

Webdunia
ಸೋಮವಾರ, 24 ಜುಲೈ 2017 (11:36 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಜು ಮತ್ತು ನಾನು ಧಾರವಾಹಿಯ ಗಲಾಟೆ ಇನ್ನೂ ಮುಂದುವರಿದಿದೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಧಾರವಾಹಿ ನಿರ್ದೇಶಕ ರಾಜೇಶ್ ಮಾವಳ್ಳಿ ತಮಗೆ ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದಿದ್ದಾರೆ.


ಅವರಿಬ್ಬರು ಸೆಟ್ ನಲ್ಲಿ ಗಲಾಟೆ ಮಾಡುತ್ತಿದ್ದಾಗ ನಿಮ್ಮದು ಏನೇ ಭಿನ್ನಾಭಿಪ್ರಾಯಗಳಿದ್ದರೂ, ಸೆಟ್ ನಿಂದ ಹೊರಗೆ ಮಾಡಿಕೊಳ್ಳಿ. ಆದರೆ ಇಲ್ಲಿ ಏನೂ ಬೇಡ ಎಂದಿದ್ದೆ. ಅವರಿಬ್ಬರು ಜಗಳವಾಡುವುದನ್ನು ನಾನು ನೋಡಿದ್ದೆ. ಆದರೆ ತೊಡೆಗೆ ಕಚ್ಚಿದ್ದು ತನಗೆ ಗೊತ್ತಿಲ್ಲ ಎಂದು ರಾಜೇಶ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಲ್ಲದೆ, ಈ ಬಗ್ಗೆ ತಾನು ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಧಾರವಾಹಿ ಮುಂದುವರಿಯಬೇಕು. ಪ್ರಕರಣದ ಬಗ್ಗೆ ಪೊಲೀಸ್ ದೂರು ದಾಖಲಾಗುವುದರಿಂದ, ಅದೇನೇ ಇದ್ದರೂ, ಅದನ್ನು ಚಾನೆಲ್ ಮುಖ್ಯಸ್ಥರೊಂದಿಗೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದುವರೆಗೆ ಇಬ್ಬರೂ ನಮ್ಮ ಕೆಲಸಕ್ಕೆ ತೊಂದರೆ ಮಾಡಿರಲಿಲ್ಲ. ಆದರೆ ಇಬ್ಬರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಅವರಿಬ್ಬರ ನಡುವೆ ಏನು ವೈಮನಸ್ಯವಿತ್ತೋ ನಮಗೆ ಗೊತ್ತಿಲ್ಲ. ಅದೇನೇ ಇದ್ದರೂ, ನಮಗೆ ಕೆಲಸ ಮಾಡೋದು, ಮುಗಿಸಿಕೊಡೋದು ಅಷ್ಟೇ ಅಲ್ವಾ ಎಂದು ನಿರ್ದೇಶಕರು ಪ್ರಶ್ನಿಸಿದ್ದಾರೆ.

ಅಲ್ಲದೆ ತಮ್ಮ ಸೆಟ್ ನಲ್ಲಿ ಯಾರೂ ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಘಟನೆ ಬಗ್ಗೆ ಮಾತನಾಡಿ ಧಾರವಾಹಿಗೆ ತೊಂದರೆ ಮಾಡುವುದು ನಮಗೆ ಇಷ್ಟವಿಲ್ಲ ಎಂದಿರುವ ನಿರ್ದೇಶಕರು, ಯಾರ ಬಗ್ಗೆಯೂ ಅಭಿಪ್ರಾಯ ಹೇಳಲ್ಲ ಎಂದಿದ್ದಾರೆ.

ಇದನ್ನೂ ಓದಿ..  ನಟ ದಿಲೀಪ್ ಗೆ ಹೈಕೋರ್ಟ್ ನಲ್ಲೂ ಸಿಗಲಿಲ್ಲ ಬಿಡುಗಡೆಯ ಭಾಗ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ಮುಂದಿನ ಸುದ್ದಿ
Show comments