Webdunia - Bharat's app for daily news and videos

Install App

’ಸೂಪರ್ ಜೋಡಿ 2’ ಸೆಂಚುರಿ ಸ್ಟಾರ್ ರಮೇಶ ಅರವಿಂದ್ ಚಾಲನೆ

Webdunia
ಗುರುವಾರ, 5 ಜನವರಿ 2017 (10:35 IST)
2017ರಲ್ಲಿ ಕರುನಾಡ ವೀಕ್ಷಕರಿಗೆ ಸಂಪೂರ್ಣವಾಗಿ ಮನರಂಜನೆಯನ್ನು ನೀಡುವ ಉದ್ದೇಶದಿಂದ ಸ್ಟಾರ್ ಸುವರ್ಣ ವಾಹಿನಿಯ ಹೊಸವರ್ಷದ ಮೊದಲ ರಿಯಾಲಿಟಿ ಷೋ “ಸೂಪರ್ ಜೋಡಿ ಸಿಜನ್ 2”ನ್ನು ಇದೇ ಶನಿವಾರದಿಂದ ರಾತ್ರಿ 8ಕ್ಕೆ ವೀಕ್ಷಕರ ಮಡಲಿಗೆ ಹಾಕಲಿದೆ.
 
ಈಗಾಲೇ ಸಾಕಷ್ಟು ರಿಯಾಲಿಟಿ ಷೋಗಳನ್ನು ನೀಡಿ ಜನಮನ ಗೆದ್ದಿರುವ ಸ್ಟಾರ್ ಸುವರ್ಣದ ಯಶಸ್ವಿಯ ರಿಯಾಲಿಟಿ ಷೋ ದಲ್ಲಿ ಸೂಪರ್ ಜೋಡಿಯೂ ಕೂಡಾ ಒಂದು. ಸೀಜನ್ ಒಂದರಲ್ಲಿ ಕಿರುತೆರೆ, ಹಿರಿತೆರೆ ಯ10 ಜೋಡಿಗಳು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಿದ್ದರು. ಈಗ ಅದೇ ಉತ್ಸಾಹದಿಂದ ಸೀಜನ್ 2 ನ್ನು ಪ್ರಾರಂಭಿಸಲು ಹೊರಟಿದೆ.
 
“ಸೂಪರ್ ಜೋಡಿ 2” ಅದ್ಧೂರಿ ವೇದಿಕೆಯಲ್ಲಿ ಹತ್ತು ಕಲರ್‌ಫುಲ್, ಬ್ಯೂಟಿಫುಲ್, ಎಮೋಶನಲ್, ಕಾಮೆಡಿ ಜೋಡಿಗಳು ಎಂಟ್ರಿ ಕೊಡುವುದರ ಮೂಲಕ ಕಿರುತೆರೆಯಲ್ಲಿ "ಸೂಪರ್ ಜೋಡಿ" ಆಗೋದಕ್ಕೆ "ರಣರಂಗಕ್ಕೆ" ಬಂದಿದ್ದಾರೆ. 
 
ಪುಷ್ಪಕ ವಿಮಾನದ ಪೈಲೆಟ್ “ಸೆಂಚುರಿ ಸ್ಟಾರ್” ರಮೇಶ್ ಅರವಿಂದ್ ಈ ಷೋಗೆ ಚಾಲನೆ ನೀಡಿದ್ದಾರೆ. ಜೋಡಿಗಳಲ್ಲಿ ಹೊಂದಾಣಿಕೆ ಎಂಬುದು ಬಹಳ ಮುಖ್ಯ ಅದನ್ನು ಸಾಧಿಸದ ವರೇ ಸೂಪರ್ ಜೋಡಿಗಳು, ಜೋಡಿಗಳ ಬಾಂಧವ್ಯವನ್ನು ತೋರಿಸುವಂಥ "ಸೂಪರ್ ಜೊಡಿ - 2" ಪ್ರಾರಂಭಿಸುತ್ತಿರವ ಸ್ಟಾರ್ ಸುವರ್ಣ ವಾಹಿನಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಶ್ಲಾಘನೆ ನೀಡಿದರು. 
 
ಇದೇ ಸಂದರ್ಭದಲ್ಲಿ ರಮೇಶ್ ಅರವಿಂದ್ ಈ ಜೋಡಿಗಳ ಸುಂದರೀಯರ ಜೊತೆ ಒಂದಷ್ಟು ಸ್ಟೆಪ್ ಹಾಕಿ ಶುಭ ಹಾರೈಸಿದರು. ಸೂಪರ್ ಜೋಡಿಯ ಮೊದಲ ಸಂಚಿಕೆಯಲ್ಲಿ  ಫೈರಿಂಗ್ ಸ್ಟಾರ್ ಪಂಚ್ ಡೈಲಾಗ್ಸ್, ಕಾಮಿಡಿ ಕೌಂಟರ್‌ಗಳು ಜೊತೆಗೆ ಮನದಾಳದ ಮಾತುಗಳನ್ನು ಮೊಟ್ಟ ಮೊದಲ ಬಾರಿಗೆ ಜೋಡಿ ಜೊತೆ ಹುಚ್ಚ ವೆಂಕಟ್ ಹಂಚಿಕೊಂಡರು.
 
ಆದಿ ಲೋಕೇಶ ಮತ್ತು ಆಂಜ್ಯಲೀನ ಜೋಡಿ ರ್ಯಾಪ್ ಸಾಂಗ ಹಾಡುವುದರ ಮೂಲಕ ಗ್ಯ್ರಾಂಡ್ ಎಂಟ್ರಿ ಕೊಟ್ಟರೇ, ಹೆಂಡತಿ ಜೊತೆ ಲವ್ ಸ್ಟೋರಿಯನ್ನು ನೆನೆದು ಗುಟ್ಟನ್ನು ಕಾಳಿ ಸ್ವಾಮಿ ಬಿಚ್ಚಿಟ್ಟರು.  ನಗುತ್ತಾ ನಗುಸುತ್ತಾ ಎಲ್ಲರ ಮನಸ್ಸು ಸೆಳೆದ ಕಾಮಿಡಿ ಜೋಡಿ ವಿಕ್ರಮ್ ಸೂರಿ ಮತ್ತು ನಮಿತ, ಸೂಪರ್ ಡ್ಯಾನ್ಸ್ ಮಾಡಿ ಎಲ್ಲರಿಗೆ ಚಾಲೆಂಜ್ ಮಾಡಿದ  ಬ್ಯೂಟಿ ಅಂಡ್ ಟ್ಯಾಲೆಂಟ್ ಹರ ಹರ ಮಾಹದೇವನ ಸತಿ ಮತ್ತು ಕಾರ್ತಿಕ ಎಲ್ಲರನ್ನು ರಂಜಿಸಿದ್ದಾರೆ.
 
 ಅಸಲಿ ಜೋಡಿಗಳ ರಿಯಾಲಿಟಿ ಷೋ ಕರ್ನಾಟಕದ ಹತ್ತು ಜನಪ್ರಿಯ ಜೋಡಿಗಳು ಕರ್ನಾಟಕದ ನೆಚ್ಚಿನ ಸೂಪರ್ ಜೋಡಿಯಾಗಲು ಸಿದ್ಧರಾಗಿದ್ದಾರೆ. ಈ ಸೀಜನ್ ಟಾಸ್ಕಗಳು ಕಲ್ಪನೆಗೂ ಮೀರಿದ್ದು, ಒಟ್ಟಾರೆ ಅಭಿಮಾನಿಗಳಿಗೆ ಈ ಷೋ ಡಬ್ಬಲ್ ಧಮಾಕ ಡಬ್ಬಲ್ ಥ್ರಿಲ್ ನೀಡಲಿದೆ.
 
ಈಗಾಗಲೇ ಕರ್ನಾಟಕದ ಮನೆಮಾತಾಗಿರುವ ಅಕುಲ್ ಈ ಸೀಜನ್‍ನ ನಿರೂಪಕ. ಎಂದಿನಂತೆ ತಮ್ಮ ಮಾತಿನ ವರಸೆಯಿಂದ ಎಲ್ಲರನ್ನು ಗಮನಸೆಳೆಯಲಿದ್ದಾರೆ. ಇನ್ನೂಳಿದ ಜೋಡಿಗಳಾದ ನೈಜೇರಿಯಾ ಹುಡುಗ ಆಡೋ ಅಬ್ದುಲ್ ಮತ್ತು ಕೃಪಾ, ಅಮೃತವರ್ಷಿಣಿಯ ಸ್ವಾತಿ ಮತ್ತು ಅನೀಲ್, ಸೈ ಮಾಮ್ಸ್‍ನ ಸೌಮ್ಯಾ ಮತ್ತು ಭಾನು ಪ್ರಕಾಶ್, ಗೀತಾಂಜಲಿ ಧಾರಾವಾಹಿಯ ನಿಶಿತಾ ಗೌಡಾ ಮತ್ತು ಪ್ರಸನ್ನ್ ಮತ್ತು ನಟ ಅರುಣ್ ಮತ್ತು ಮಾಧುರ್ಯಾ ಕಣದಲ್ಲಿದ್ದಾರೆ. ಹತ್ತು ಜೋಡಿಗಳ “ಸೂಪರ್ ಜೋಡಿ ಸಿಜನ್  2” ಇದೇ ಜನವರಿ 7ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಸ್ಟಾರ್ ಸುವರ್ಣ ಚಾನಲ್ ನಲ್ಲಿ ಮೂಡಿಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments