ಸ್ಪರ್ಧಿಗಳ ವರ್ತನೆಗೆ ನಿವೇದಿತಾ ಬೇಸರ: ಕಣ್ಣೀರಿಟ್ಟ ಬಾರ್ಬಿ ಡಾಲ್

Webdunia
ಬುಧವಾರ, 8 ನವೆಂಬರ್ 2017 (09:36 IST)
ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಈಗಾಗಲೇ ಮೂರು ಎಲಿಮಿನೇಟ್ ಆಗಿದ್ದು, ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ಬದಲಾವಣೆಗಳು ಕಾಣುತ್ತಿವೆ.

ನಿವೇದಿತಾ ಮನೆಯಲ್ಲಿರುವ ಇತರೆ ಸ್ಪರ್ಧಿಗಳ ಪೈಕಿ ಕಿರಿಯಳು. ಈಕೆ ಮನೆಗೆ ಬಂದಾಗಿನಿಂದ ಮಗುವಿನಂತೆ ಎಲ್ಲರೂ ಟ್ರೀಟ್ ಮಾಡುತ್ತಿದ್ದರು. ಆದರೆ ಈಗ ಆಕೆಯ ಮೇಲಿನ ಅಭಿಪ್ರಾಯ ಬದಲಾಗಿದೆ. ಕೃಷಿ, ಆಶಿತಾ, ಶೃತಿ ಹಾಗೂ ಅನುಪಮಾ ಈ ಬಗ್ಗೆ ಬೆಡ್ ರೂಂ ಏರಿಯಾದಲ್ಲಿ ಚರ್ಚೆ ನಡೆಸಿದ್ದಾರೆ. ನಿವೇದಿತಾ ನಾವಂದುಕೊಂಡಂತಲ್ಲ. ಆಕೆ ಪಕ್ಕಾ ಪ್ಲಾನ್ ಮಾಡಿಕೊಂಡು ಗೇಮ್ ಆಡುತ್ತಿದ್ದಾಳೆ. ಹೀಗಾಗಿ ಜನ ಹೆಚ್ಚು ವೋಟ್ ಮಾಡುತ್ತಿದ್ದು, ನಾಲ್ಕು ವಾರದಿಂದಲೂ ಮನೆಯಲ್ಲಿಯೇ ಇದ್ದಾಳೆ ಎಂದು ಚರ್ಚೆ ನಡೆಸಿದರು.

ಇನ್ನು ಮನೆಯಲ್ಲಾಗುತ್ತಿರುವ ಬದಲಾವಣೆ ಬಗ್ಗೆ ನಿವೇದಿತಾಗೂ ತಿಳಿದಿದೆ. ಮೊನ್ನೆ ಸಹ ಈ ಬಗ್ಗೆ ಸಿಹಿಕಹಿ ಚಂದ್ರು ಬಳಿ ಹೇಳಿ ಕಣ್ಣೀರಿಟ್ಟಿದ್ದಳು. ನಿನ್ನೆ ಸಹ ಕಣ್ಣೀರಿಟ್ಟಿದ್ದಾಳೆ. ಸದ್ಯ ಮನೆಯ ಸದಸ್ಯರು ಊಟ, ಕಾಫಿ, ಟೀ ತೆಗೆದುಕೊಂಡಿದ್ದಾರ ಎಂದು ವಿಚಾರಿಸಿಕೊಳ್ಳುವ ಜವಾಬ್ದಾರಿ ನಿವೇದಿತಾಗೆ ವಹಿಸಲಾಗಿದೆ. 'ಟ್ರೂತ್‌ ಆ್ಯಂಡ್ ಡೇರ್‌' ಗೇಮ್‌ ಅನ್ವಯ ನಿವೇದಿತಾಳ ಬಳಿ ಬಂದ ಜಗನ್‌, ನೀನು ಊಟಕ್ಕೆ ಕರೆದಾಗ ನನಗೆ ಕಿರಿಕಿರಿ ಅನ್ನಿಸಿತು. ನಿನ್ನ ಮೇಲೆ ಕೋಪ ಬಂದಿತ್ತು ಎಂದು ನೇರವಾಗಿ ಹೇಳಿದ್ರು. 

ಹೀಗಾಗಿ ಜಗನ್‌ ವರ್ತನೆಯಿಂದ ನಿವೇದಿತಾ ಮತ್ತೆ ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿ ಎಲ್ಲರೂ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ನಾನು ಯಾರಿಗೂ ಏನೂ ಮಾಡಿಲ್ಲ. ಎಲ್ಲರೂ ನನ್ನ ಜತೆ ಹೀಗೇಕೆ ಮಾಡುತ್ತಿದ್ದಾರೆ ಎಂದು ಬಿಕ್ಕಿಬಿಕ್ಕಿ ಅತ್ತಳು ನಿವೇದಿತಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

ಸೋಮವಾರದ್ ಮೇಲ್ ನೋಡ್ರೀ, ಹೆಂಗ್ ಬಿದ್ದೋಗುತ್ತೆ ಅಂದೋರಿಗೆ: ದುನಿಯಾ ವಿಜಯ್‌ ಹೀಗಂದಿದ್ಯಾಕೆ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಮುಂದಿನ ಸುದ್ದಿ
Show comments