ಶಿವರಾತ್ರಿ ಸಂಭ್ರಮದಲ್ಲಿ ’ಹರ ಹರ ಮಹಾದೇವ’ ತಂಡ

Webdunia
ಬುಧವಾರ, 15 ಫೆಬ್ರವರಿ 2017 (10:35 IST)
ಸ್ಟಾರ್ ಸುವರ್ಣವಾಹಿನಿಯು ಮಹಾ ಶಿವರಾತ್ರಿ ಅಂಗವಾಗಿ “ಮಹಾಯಾಗ” ವನ್ನು ಇದೇ ಫೆಬ್ರವರಿ 18ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಕಮಲಮ್ಮನಗುಂಡಿ (ಇಸ್ಕಾನ್ ಎದುರು) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. 
 
ಬೆಳಗ್ಗೆ 9ಕ್ಕೆ ಭಕ್ತರಿಂದ 11 ಲಕ್ಷ ಶಿವನಾಮ ಜಪ, 1008 ಮೃತ್ತಿಕಾ ಶಿವಲಿಂಗ ಸ್ಥಾಪನೆ ಮತ್ತು ಡಾ. ವಿದ್ವಾನ್ ಗೋಪಾಲಕೃಷ್ಣ ಗುರೂಜಿಯವರಿಂದ “ಮಹಾ ರುದ್ರಯಾಗ” ನಡೆಯಲಿದೆ. ಮಧ್ಯಾಹ್ನ 2ಕ್ಕೆ ಬೆಂಗಳೂರಿನ ವಿವಿಧ ಭಜನಾ ಮಂಡಿಗಳಿಂದ ಶಿವ, ಪಾರ್ವತಿ ಮತ್ತು ಗಣೇಶನ ಕುರಿತು ಭಜನೆ ನಡೆಯಲಿದೆ. 
 
ಸಂಜೆ 4ಕ್ಕೆ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕರಿಂದ ಸಂಕಲ್ಪ ಮತ್ತು ಮಹಾ ಪೂಜೆ ನೆರವೇರಲಿದೆ. ಅಂದು ಸಂಜೆ 6ಕ್ಕೆ ಸುವರ್ಣ ಲೇಡೀಸ್ ಕ್ಲಬ್ ಸದಸ್ಯರಿಂದ ನಟರಾಜನಿಗೆ ನಾಟ್ಯ ನಮನವನ್ನು ಹಮ್ಮಿಕೊಳ್ಳಲಾಗಿದೆ.
 
ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣವಾಹಿನಿಯ “ಹರ ಹರ ಮಹಾದೇವ” ಧಾರಾವಾಹಿಯ ನಟ ನಟಿಯರು ಭಾಗವಹಿಸಲಿದ್ದಾರೆ. ಹಾಗೆ ಸ್ಟಾರ್ ಸುವರ್ಣದ ಎಲ್ಲ ಪರಿವಾರದ ಸದಸ್ಯರುಗಳು ನಾಡಿನ ಹೆಸರಾಂತ ಗಣ್ಯವ್ಯಕ್ತಿಗಳು, ನರೇಂದ್ರ ಬಾಬು ಶರ್ಮಾ ಗುರೂಜಿ ಮತ್ತು ಸಂತೋಷ ಗುರೂಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಇಡೀ ದಿನ ಶಿವನ ನಾಮಸ್ಮರಣೇಯ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಉಚಿತ ಪ್ರವೇಶವಿದೆ ಎಂದು ಸ್ಟಾರ್ ಸುವರ್ಣವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments