Webdunia - Bharat's app for daily news and videos

Install App

ಬಿಗ್ ಬಾಸ್ ಗೆ ಕೋಪ ಬಂದಿದೆ!

Webdunia
ಗುರುವಾರ, 3 ನವೆಂಬರ್ 2016 (13:24 IST)
ಬೆಂಗಳೂರು: ಕಲರ್ಸ್ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಯಾರೂ ಟಾಸ್ಕ್ ಸರಿಯಾಗಿ ನಿಭಾಯಿಸಿಲ್ಲ ಎಂದು ಕಳೆದ ವಾರವೇ ಬಿಗ್ ಬಾಸ್ ಹೇಳಿದ್ದರು. ಈ ವಾರವೂ ಅದೇ ರಾಗ, ಅದೇ ಹಾಡು.

ಹೀಗಾಗಿ ಲಕ್ಷುರಿ ಬಜೆಟ್ ಟಾಸ್ಕ್ ಅರ್ಧಕ್ಕೆ ನಿಲ್ಲಿಸಲು ಬಿಗ್ ಬಾಸ್ ಮನೆಯ ಸದಸ್ಯರಿಗೆ ಸೂಚಿಸಿದ್ದಾರೆ. ಮನೆಯ ಸದಸ್ಯರಿಗೆ ರಾಣಿ-ಮಹಾರಾಣಿ ಟಾಸ್ಕ್ ನೀಡಲಾಗಿತ್ತು. ಅದರಂತೆ ಮಾಳವಿಕಾ ಮಹಾರಾಣಿ ಮತ್ತು ಸಂಜನಾ ಯುವರಾಣಿ, ಮೋಹನ್ ಮಂತ್ರಿ, ಕೀರ್ತಿ ಕುಮಾರ್ ಸೇನಾಪತಿ ಹಾಗೂ ಉಳಿದವರು ಸೇವಕರ ಪಾತ್ರ ನಿಭಾಯಿಸಬೇಕಿತ್ತು.

ಆದರೆ ಕೊಟ್ಟ ಟಾಸ್ಕ್ ಮಾಡುವುದನ್ನು ಬಿಟ್ಟು, ತಮ್ಮದೇ ಲೋಕದಲ್ಲಿದ್ದ, ಕಚ್ಚಾಡಿಕೊಂಡಿದ್ದ ಸದಸ್ಯರ ಮೇಲೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ. ಅರ್ಧಕ್ಕೇ ಟಾಸ್ಕ್ ನಿಲ್ಲಿಸಿ ಎಂದು ಸೂಚಿಸಿದ ನಂತರ ಎಚ್ಚೆತ್ತುಕೊಂಡ ಮನೆಯ ಸದಸ್ಯರು ಮನವಿ ಮಾಡಿಕೊಂಡರೂ ಬಿಗ್ ಬಾಸ್ ಕರಗಲಿಲ್ಲ. ಮುಂದಿನ ವಾರದ ರೇಷನ್ ಕೂಡಾ ಅರ್ಧದಷ್ಟು ಕಡಿತ ಮಾಡಿದ ಮೇಲೆ ಮನೆಯ ಸದಸ್ಯರು ಒಬ್ಬರ ಮೇಲೊಬ್ಬರು ಆರೋಪ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ.

ಈ ಶನಿವಾರ ಮತ್ತೆ ಕಿಚ್ಚ ಸುದೀಪ್ ಕೈಯಲ್ಲಿ ಮನೆಯ ಸದಸ್ಯರ ಬೇಜವಾಬ್ದಾರಿ ವರ್ತನೆಗೆ ಬೈಸಿಕೊಳ್ಳುವ ಪ್ರಸಂಗ ಎದುರಾರೂ ಅಚ್ಚರಿಯಿಲ್ಲ. ಯಾಕೆಂದರೆ  ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡುವುದೇ ವೀಕ್ಷಕರ ಮನರಂಜನೆಗಾಗಿ. ಮನರಂಜನೆಯೇ ಇಲ್ಲದಿದ್ದ ಮೇಲೆ ಬಿಗ್ ಬಾಸ್ ಯಾರು ನೋಡುತ್ತಾರೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ನಿಷೇಧಿತ ಉತ್ಪನ್ನಗಳಿಗೆ ಪ್ರಚಾರ: ಬಾಲಿವುಡ್‌ ಸ್ಟಾರ್‌ ಶಾರುಖ್, ದೇವಗನ್, ಟೈಗರ್ ಶ್ರಾಫ್‌ಗೆ ಪೋಕಾಸ್‌ ನೋಟಿಸ್

ಮುಂದಿನ ಸುದ್ದಿ
Show comments