Webdunia - Bharat's app for daily news and videos

Install App

ಕನ್ನಡಾಭಿಮಾನ ಪ್ರಶ್ನಿಸಿ ಟ್ರೋಲ್ ಮಾಡಿದವರಿಗೆ ಬಿಗ್ ಬಾಸ್ ಅಶಿತಾ ಚಂದ್ರಪ್ಪ ಕೊಟ್ಟ ತಿರುಗೇಟು ಏನು?

Webdunia
ಗುರುವಾರ, 11 ಜನವರಿ 2018 (14:35 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಅಶಿತಾ ಚಂದ್ರಪ್ಪ ತೆಲುಗು ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಕನ್ನಡಾಭಿಮಾನ ಇಲ್ವಾ ಎಂದು ಟ್ರೋಲ್ ಮಾಡಿದ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.
 

ಫೇಸ್ ಬುಕ್ ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅಶಿತಾ ‘ನನ್ನ ಕನ್ನಡಾಭಿಮಾನವನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದಾಳೆ ಎಂಬುದನ್ನು ನೆನಪಲ್ಲಿಟ್ಟುಕೊಂಡು ಪ್ರತಿಕ್ರಿಯಿಸಿ. ನಾನು ಯಾವ ಸಿನಿಮಾ ನೋಡಬೇಕೆಂದು ನಿರ್ಧರಿಸುವ ಹಕ್ಕು ನನಗಿದೆ. ಅಷ್ಟಕ್ಕೂ ಕಲೆಗೆ ಯಾವುದೇ ಭಾಷೆಯ ಅಡೆತಡೆಯಿಲ್ಲ.

ಎಲ್ಲದಕ್ಕೂ ಒಂದು ಮಿತಿಯಿದೆ. ಇಷ್ಟು ದಿನ ನನ್ನ ಬಗ್ಗೆ ಕೆಟ್ಟದಾಗಿ ಬರೆದ ಸಂದೇಶಗಳಿಗೆ ನಾನು ಪ್ರತಿಕ್ರಿಯಿಸುತ್ತಿರಲಿಲ್ಲ. ಪವನ್ ಕಲ್ಯಾಣ್ ಬಗ್ಗೆ ಬರೆದಿದ್ದಕ್ಕೆ 57 ಕಾಮೆಂಟ್ ಗಳು! ಅದೇ ರೀತಿ ಬಿಗ್ ಬಾಸ್ ಬಗ್ಗೆ ಬರೆದ ಪ್ರಶ್ನೆಗಳಿಗೂ ನಾನು ಉತ್ತರಿಸಿಲ್ಲ. ಅಷ್ಟಕ್ಕೂ ನಮಗೆ ಗೊತ್ತು ಆ ಮನೆಯೊಳಗೆ ಇರುವ ಕಷ್ಟ. 24 ಗಂಟೆ ನಾವು ಪಡುವ ಕಷ್ಟವನ್ನು ನಿಮಗೆ 1.5 ಗಂಟೆ ತೋರಿಸುತ್ತಾರೆ. ಅಲ್ಲಿ ಏನಾಗುತ್ತದೆ ಎಂಬುದು ನಮಗೆ ಮಾತ್ರ ಗೊತ್ತು. ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು, ಅಭಿಪ್ರಾಯಗಳನ್ನು ಗೌರವಿಸಿದ್ದೇನೆ. ಅದರರ್ಥ ನೀವು ಏನು ಬೇಕಾದದರೂ ಮಾತಾಡಬಹುದು ಎಂದಲ್ಲ’ ಎಂದು ಅಶಿತಾ ಬರೆದುಕೊಂಡಿದ್ದಾರೆ.

ಅದರ ಜತೆಗೆ ಸಂಕ್ರಾಂತಿಯಂದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಚಕ್ರವರ್ತಿ ಸಿನಿಮಾವನ್ನು ಎದುರು ನೋಡುತ್ತಿರುವುದಾಗಿಯೂ ಮತ್ತೊಂದು ಪೋಸ್ಟ್ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments