Select Your Language

Notifications

webdunia
webdunia
webdunia
webdunia

ಹಾಟ್ ಪಾಯಲ್ ಹಿಂದಿನ ಜನ್ಮದಲ್ಲಿ ಪುರುಷನಾಗಿದ್ದಳಂತೆ!

ಹಾಟ್ ಪಾಯಲ್ ಹಿಂದಿನ ಜನ್ಮದಲ್ಲಿ ಪುರುಷನಾಗಿದ್ದಳಂತೆ!
IFM
ಹಾಟ್ ನಟಿ ಪಾಯಲ್ ರೋಹಟ್ಗಿ ತನ್ನ ಹಿಂದಿನ ಜನ್ಮದಲ್ಲಿ ಪುರುಷನಾಗಿದ್ದಳಂತೆ. ಆಕೆಗೆ ಇದೀಗ ತ್ನ ಹಿಂದಿನ ಜನ್ಮದ ರಹಸ್ಯ ತಿಳಿದುಕೊಂಡಾಗಿದೆ. ಪಾಯಲ್ ಇತ್ತೀಚೆಗೆ ಖಾಸಗಿ ಚಾನಲ್ ನಡೆಸುವ ರಾಝ್: ಪಿಛ್‌ಲೇ ಜನ್ಮ್ ಕಾ ಎಂಬ ಕಾರ್ಯಕ್ರಮದಲ್ಲಿ ಸಮ್ಮೋಹಿನಿ ವಿದ್ಯೆಗೆ ಒಳಗಾಗಿ ಈಕೆ ತನ್ನ ಹಿಂದಿನ ಜನ್ಮದ ಪ್ರಯಾಣ ಮಾಡಿ ಬಂದಿದ್ದಾಳಂತೆ.

ಎಲ್ಲ ಹುಡುಗಿಯರಂತೆ ಪಾಯಲ್‌ಗೂ ಅಪ್ಪನ ಪ್ರೀತಿಪಾತ್ರ ಮಗಳಾಗಬೇಕೆಂದು ಆಸೆ. ಆದರೆ ಪಾಯಲ್ ತನ್ನ ಅಪ್ಪನಿಂದ ದೂರಾಗಿದ್ದಾಳೆ. ಅಪ್ಪ ಹಾಗೂ ಮಗಳ ನಡುವೆ ವೈಮನಸ್ಸು ಉಂಟಾಗಿ ಇಬ್ಬರೂ ಬೇರೆಬೇರೆಯಾಗಿದ್ದಾರೆ. ಹೀಗೇಕೆ ಆಗಿದೆ ಎಂಬುದಕ್ಕೂ ಪಾಯಲ್‌ಗೆ ತನ್ನ ಹಿಂದಿನ ಜನ್ಮದ ಪ್ರಭಾವವೇ ಕಾರಣ ಎಂಬ ಉತ್ತರ ಸಿಕ್ಕಿದೆಯಂತೆ.

ಪಾಯಲ್ ತನ್ನ ಹಿಂದಿನ ಜನ್ಮಲ್ಲಿ ಆಲ್ಬರ್ಟ್ ಪೋಸ್ಟ್ ಎಂಬ ಹೆಸರಿನ ಪುರುಷನಾಗಿದ್ದಳಂತೆ. ದಕ್ಷಿಣ ಅಮೆರಿಕಾದಲ್ಲಿ ವಾಸವಾಗಿರುವ ಅಲ್ಬರ್ಟ್‌ಗೆ ಹೆಂಡತಿ ಮರಿಯಾ ಹಾಗೂ ಜಾನ್ ಎಂಬ ಪುತ್ರ ಇದ್ದರು. ಸಂತೋಷವಾದ, ಯಾವುದೇ ಅಹಿತಕರವಲ್ಲದ ನೆಮ್ಮದಿಯ ಕೌಟುಂಬಿಕ ಜೀವ ಕಾಣುವುದು ಅಲ್ಬರ್ಟ್ ಆಸೆ. ಅಲ್ಬರ್ಟ್‌ಗೆ ಅತೀ ಆಪ್ತನಾದ ಒಬ್ಬ ಸ್ನೇಹಿತನೂ ಇರುತ್ತಾನೆ. ನಂಬಿಕೆಯುಕ್ತ ಗೆಳೆಯಾದರೂ ಒಮ್ಮೆ ಅಲ್ಬರ್ಟ್ ಆತನ ಹೆಂಡತಿ ಹಾಗೂ ಆ ಗೆಳೆಯ ನಡುವೆ ಅಹಿತಕರ ಘಟನೆಯೊಂದು ನಡೆದು ಹೋಗುತ್ತದೆ. ಇದರಿಂದ ಅಲ್ಬರ್ಟ್ ಅತೀವ ಖಿನ್ನನಾಗುತ್ತಾನೆ. ಜೀವನ ಚಿತ್ರಹಿಂಸೆಯಾಗುತ್ತದೆ.

ಸಮ್ಮೋಹಿನಿಗೊಳಗಾಗಿ ಹೊರಬಂದ ಮೇಲೆ ಪಾಯಲ್ ತಾನು ಅಲ್ಬರ್ಟ್ ಆಗಿದ್ದೆ ತನ್ನ ಹಿಂದಿನ ಜನ್ಮದಲ್ಲಿ ಎಂದು ಟಿವಿಯಲ್ಲಿ ವಿವರಿಸಿದ್ದಾಳೆ. ತನ್ನ ಹಳೆಯ ಜೀವನದಲ್ಲೂ ತಾನು ಸುಖಮಯ ಸಂತೃಪ್ತಿಯ ಕೌಟುಂಬಿಕ ಜೀವ ಬಯಸಿದ್ದೆ. ಆದರೂ ಒಂದ ಸಣ್ಣ ಅಹಿತಕರ ಘಟನೆ ನಡೆದುಹೋಯಿತು. ಅದರ ಪ್ರಭಾವವೇ ಇದು. ಹಾಗಾಗಿಯೇ ನಾನು ಈ ಜನ್ಮದಲ್ಲೂ ಅಪ್ಪನೊಂದಿಗೆ ಬಯಸದ ಘಟನೆ ನಡೆದುಹೋಗಿದೆ ಎನ್ನುತ್ತಾಳೆ ಪಾಯಲ್.

Share this Story:

Follow Webdunia kannada