Webdunia - Bharat's app for daily news and videos

Install App

ಮತ್ತೆ ಕೋಟ್ಯಧಿಪತಿ: ಶುರುವಾಗಿದೆ ಆಡಿಷನ್, ರೆಡಿನಾ?

Webdunia
PR
ಕನ್ನಡದ ಕೋಟ್ಯಧಿಪತಿ ಮೊದಲ ಅವತರಣಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡಿದ ಮೋಡಿಯನ್ನು ಯಾರು ತಾನೇ ಮರೆಯಲು ಸಾಧ್ಯ? ಅದೇ ಪುನೀತ್ ಈಗ ಮತ್ತೆ ಕಿರುತೆರೆ ಮೇಲೆ ಹಣದ ಥೈಲಿ ಹಿಡಿದುಕೊಂಡು ಬರಲು ರೆಡಿಯಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗಾಗಿ ಆಡಿಷನ್ ಕೂಡ ಶುರುವಾಗಿದೆ.

ಈ ಬಾರಿಯೂ ಸುವರ್ಣ ಚಾನೆಲ್‌ನಲ್ಲೇ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಯಾವಾಗ ಆರಂಭ ಅನ್ನೋದು ಖಚಿತವಿಲ್ಲ. ಆದರೆ ಡಿಸೆಂಬರ್ 15ರಿಂದಲೇ ಪುನೀತ್ ತೆರೆಯ ಮೇಲೆ ಬರಲಿದ್ದಾರೆ. ಅವರು ಪ್ರತಿರಾತ್ರಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದವರನ್ನು ಆಯ್ಕೆ ಮಾಡಲಾಗುತ್ತದೆ. ಹಲವು ಸುತ್ತಿನ ಪ್ರಕ್ರಿಯೆ ಮುಗಿದ ನಂತರವಷ್ಟೇ ಸ್ಪರ್ಧಿಯಾಗಿ ಪುನೀತ್ ಎದುರು ಕೂರಲು ಅವಕಾಶ ಸಿಗುತ್ತದೆ.

ಕಾರ್ಯಕ್ರಮ ಮುಂದುವರಿಯುತ್ತಿರುವುದಕ್ಕೆ ಸುವರ್ಣ ಬಿಸಿನೆಸ್ ಹೆಡ್ ಅನೂಪ್ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕಕ್ಕೆ ಮತ್ತೆ ಬೃಹತ್ ರಿಯಾಲಿಟಿ ಶೋವನ್ನು ತರುತ್ತಿರುವುದು ಖುಷಿ ತಂದಿದೆ. ಮೊದಲ ಅವತರಣಿಕೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ರೀತಿ ಈ ಬಾರಿಯೂ ಯಶಸ್ಸು ಸಿಗುವಂತೆ ಯೋಜನೆಗಳನ್ನು ರೂಪಿಸಿದ್ದೇವೆ. ಅದಕ್ಕಿಂತಲೂ ಚೆನ್ನಾಗಿರಬೇಕೆಂದು ಪ್ರಯತ್ನಿಸುತ್ತಿದ್ದೇವೆ.

ಪುನೀತ್ ಮತ್ತು ಬಿಗ್ ಸಿನೆರ್ಜಿ ಟೀಮ್ ಜತೆ ಕಾರ್ಯ ನಿರ್ವಹಿಸುವುದು ಅದ್ಭುತ ಅನುಭವ. ಮತ್ತೆ ಕನ್ನಡದ ಪ್ರೇಕ್ಷಕರಿಗೆ ಸುವರ್ಣ ವಾಹಿನಿ ಸಂಪೂರ್ಣ ಮನರಂಜನೆ ಒದಗಿಸಲು ಸಿದ್ಧವಾಗಿದೆ. ವೀಕ್ಷಕರಿಗೆ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಅನೂಪ್ ತಿಳಿಸಿದ್ದಾರೆ.

ಕಾರ್ಯಕ್ರಮದ ಹೆಸರೇ ಹೇಳುವಂತೆ 'ಕೋಟ್ಯಧಿಪತಿ'ಯಲ್ಲಿ ಕೋಟಿ ಬಹುಮಾನದ ಆಫರ್ ನೀಡಲಾಗುತ್ತದೆ. ಆದರೆ ಕಳೆದ ಅವತರಣಿಕೆಯಲ್ಲಿ ಯಾರೂ ಕೋಟಿ ಗೆಲ್ಲಲಿಲ್ಲ. ಗರಿಷ್ಠ ಮೊತ್ತವನ್ನು ಪಡೆದದ್ದು ಪಂಪಣ್ಣ ಮಾಸ್ತರ್ ಎಂಬುವವರು. ಅವರು 50 ಲಕ್ಷ ರೂ. ಕಿಸೆಗೆ ಹಾಕಿಕೊಂಡಿದ್ದರು.

ಕೋಟ್ಯಧಿಪತಿ ಮೊದಲ ಅವತರಣಿಕೆಯಲ್ಲಿ ರಮ್ಯಾ, ಲಕ್ಷ್ಮಿ, ರವಿಚಂದ್ರನ್, ಅನಿಲ್ ಕುಂಬ್ಳೆ ಮುಂತಾದ ಜನಪ್ರಿಯರು ಅತಿಥಿಗಳಾಗಿ ಭಾಗವಹಿಸಿದ್ದರು. ಒಟ್ಟು 80 ಕಂತುಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments