Webdunia - Bharat's app for daily news and videos

Install App

2011ರ ವಿಶ್ವಕಪ್‌ಗೆ ಯೂನಿಸ್‌, ಆಫ್ರಿದಿ ಟಿ20 ನಾಯಕ?

Webdunia
ಸೋಮವಾರ, 22 ಜೂನ್ 2009 (15:41 IST)
ಟ್ವೆಂಟಿ-20ಯಿಂದ ನಿವೃತ್ತಿ ಘೋಷಿಸಿರುವ ಯೂನಿಸ್ ಖಾನ್ ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ 2011ರ ವಿಶ್ವಕಪ್‌ವರೆಗೂ ಮುಂದುವರಿದು ಪ್ರಶಸ್ತಿ ಗೆಲ್ಲುವ ಬಯಕೆ ವ್ಯಕ್ತಪಡಿಸಿದ್ದರೆ, ಅತ್ತ ತೆರವಾಗಿರುವ ಟ್ವೆಂಟಿ-20 ನಾಯಕನ ಸ್ಥಾನಕ್ಕೆ ಶಾಹಿದ್ ಆಫ್ರಿದಿ ಆಯ್ಕೆಯಾಗುವ ಸಾಧ್ಯತೆ ಎದ್ದು ಕಾಣುತ್ತಿದೆ.

ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಂಡ ನಂತರ ಈ ಪ್ರಕಾರದ ಕ್ರಿಕೆಟ್‌ನಲ್ಲಿ ಮುಂದೆ ಆಡುವುದಿಲ್ಲ ಎಂದು ಘೋಷಿಸಿರುವ ಯೂನಿಸ್ ಪ್ರಕಾರ ಆ ಸ್ಥಾನವನ್ನು ಶಾಹಿದ್ ಆಫ್ರಿದಿ ವಹಿಸಿಕೊಳ್ಳಬೇಕಂತೆ. ಆದರೆ ಏಕದಿನ ತಂಡದ ನಾಯಕತ್ವವನ್ನು ಸದ್ಯದ ಮಟ್ಟಿಗೆ ತ್ಯಜಿಸುವುದಿಲ್ಲ.

" ಯೂನಿಸ್ ಒಬ್ಬ ನೇರ ವ್ಯಕ್ತಿತ್ವದ ಮನುಷ್ಯ. ಹಾಗಾಗಿ ಅವರು ಟ್ವೆಂಟಿ-20ಯನ್ನು ತ್ಯಜಿಸಿ ಆಫ್ರಿದಿ ನಾಯಕತ್ವದ ಯುವ ಆಟಗಾರರಿಗೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದಾರೆ. ಆದರೆ ಅವರು 2011ರ ವಿಶ್ವಕಪ್ ಗೆಲ್ಲುವ ಸಲುವಾಗಿ ನಾಯಕತ್ವ ಮುಂದುವರಿಸಲು ತೀರಾ ಉತ್ಸುಕರಾಗಿದ್ದಾರೆ" ಎಂದು ಮೂಲವೊಂದು ತಿಳಿಸಿದೆ.
PTI

ಮೂಲಗಳ ಪ್ರಕಾರ ಟ್ವೆಂಟಿ-20 ವಿಶ್ವಕಪ್ ಆರಂಭದಲ್ಲಿ ತಂಡದೊಳಗಿನ ಕೆಲವು ಸಮಸ್ಯೆಗಳಿಂದಾಗಿ ಹಿರಿಯ ಆಟಗಾರರ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಯೂನಿಸ್ ಖಾನ್ ನಿಯಂತ್ರಣ ಪಡೆದುಕೊಳ್ಳಲು ಅಸಾಧ್ಯವಾದ ಕಾರಣ ಆರಂಭಿಕ ಪಂದ್ಯಗಳನ್ನು ಗೆಲ್ಲಲಾಗಿರಲಿಲ್ಲ. ಇದೇ ಪರಿಸ್ಥಿತಿ 1992ರ ವಿಶ್ವಕಪ್ ಸಂದರ್ಭದಲ್ಲೂ ನಡೆದಿತ್ತು. ಸ್ಟಾರ್ ದಾಂಡಿಗ ಜಾವೇದ್ ಮಿಯಾಂದಾದ್‌ರನ್ನು ತಂಡಕ್ಕೆ ಕೊನೆಯ ಕ್ಷಣದಲ್ಲಿ ಸೇರ್ಪಡೆಗೊಳಿಸಿದ್ದುದೇ ಅದಕ್ಕೆ ಕಾರಣವಾಗಿತ್ತು.

ಕಳೆದ ಪೆಬ್ರವರಿಯಲ್ಲಿ ಶೋಯಿಬ್ ಮಲಿಕ್ ಬದಲಿಗೆ ಯೂನಿಸ್‌ರಿಗೆ ಪಟ್ಟಾಭಿಷೇಕ ಮಾಡಿದ ನಂತರ ಶ್ರೀಲಂಕಾ ವಿರುದ್ಧದ ತಾಯ್ನೆಲದ ಏಕದಿನ ಸರಣಿಯ ಸಂದರ್ಭದಲ್ಲೂ ಮುಂಚೂಣಿ ಆಟಗಾರರು ಸಹಕಾರ ನೀಡಿರಲಿಲ್ಲ ಎಂಬುದು ಕೂಡ ಗುಟ್ಟಾಗಿ ಉಳಿದಿರಲಿಲ್ಲ.

ಇದೇ ರೀತಿಯ ಸಮಸ್ಯೆಗಳನ್ನು ಶೋಯಿಬ್ ಮಲಿಕ್, ಮಿಸ್ಬಾ-ಉಲ್-ಹಕ್, ಸಲ್ಮಾನ್ ಭಟ್ ಮತ್ತು ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್‌ರಿಂದಲೂ ಯೂನಿಸ್ ಎದುರಿಸುತ್ತಿದ್ದಾರೆ. ಆದರೆ ಆಫ್ರಿದಿಯವರದ್ದು ಸಂಪೂರ್ಣ ಬೆಂಬಲವಿದೆ ಎಂದು ಮೂಲವೊಂದ ಬಹಿರಂಗಪಡಿಸಿದೆ.

ಆಫ್ರಿದಿಗೆ ನಾಯಕನಾಗುವ ಬಯಕೆ..

ಅದ್ಭುತ ಪ್ರದರ್ಶನದ ಮೂಲಕ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಮಿಂಚಿದ ಆಲ್-ರೌಂಡರ್ ಶಾಹಿದ್ ಆಫ್ರಿದಿಗೆ ನಿವೃತ್ತಿ ಘೋಷಿಸುವ ಮೊದಲು ದೇಶದ ತಂಡವನ್ನು ನಾಯಕನಾಗಿ ಪ್ರತಿನಿಧಿಸುವ ಆಸೆಯಿದೆ ಎಂದು ಹಲವಾರು ತಿಂಗಳುಗಳ ಹಿಂದೆಯೇ ಹೇಳಿಕೊಂಡಿದ್ದರು. ಆ ಸಮಯ ಬಹುತೇಕ ಹತ್ತಿರವಾದಂತೆ ಗೋಚರಿಸುತ್ತಿದೆ.

ಇದೀಗ ಟ್ವೆಂಟಿ-20ಯಿಂದ ಯೂನಿಸ್ ನಿವೃತ್ತಿಯಾಗಿರುವುದರಿಂದ ಈ ಪ್ರಕಾರದ ತಂಡದ ನಾಯಕತ್ವ ಖಾಲಿ ಬಿದ್ದಿದೆ. ವಿಶ್ವಕಪ್‌ನಲ್ಲಿ ಮಿಂಚಿರುವ ಕಾರಣ ಆಫ್ರಿದಿಯವರಿಗೇ ಆ ಪಟ್ಟ ದೊರೆಯಬಹುದು ಎನ್ನುವುದು ಹಲವಲ ಅಂಬೋಣ.
PTI

" ಈ ಹಂತದಲ್ಲಿ ಶೋಯಿಬ್ ಮಲಿಕ್‌ರನ್ನು ಯಾವುದೇ ಕಾರಣಕ್ಕೂ ನಾಯಕತ್ವಕ್ಕೆ ಪರಿಗಣಿಸುವುದು ತೀರಾ ಅಪದ್ಧ. ಒಬ್ಬ ಹಿರಿಯ ಆಟಗಾರನಂತೆ ಜವಾಬ್ದಾರಿಯುತ ನಿರ್ವಹಣೆ ನೀಡಿರುವ ಆಫ್ರಿದಿ ಪಾಕಿಸ್ತಾನ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕನಾಗುವ ಸಾಧ್ಯತೆಯೇ ಹೆಚ್ಚು" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಗೊಂದು ವೇಳೆ ಟ್ವೆಂಟಿ-20 ತಂಡಕ್ಕೆ ಆಫ್ರಿದಿ ನಾಯಕರಾದಲ್ಲಿ ಅವರು ಶ್ರೀಲಂಕಾ ವಿರುದ್ಧ ದ್ವೀಪರಾಷ್ಟ್ರದಲ್ಲೇ ಆಗಸ್ಟ್ 12ರಂದು ನಡೆಯಲಿರುವ ಟ್ವೆಂಟಿ-20 ಪಂದ್ಯದಲ್ಲಿ ಕಪ್ತಾನಗಿರಿಯೊಂದಿಗೆ ಕಣಕ್ಕಿಳಿಯಬಹುದಾಗಿದೆ.

ಅಲ್ಲದೆ ಯೂನಿಸ್‌ರವರು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡುವ ನಿರ್ಧಾರ ಕೈಗೊಂಡಲ್ಲಿ ಆಫ್ರಿದಿ ಪಾಕಿಸ್ತಾನ ಏಕದಿನ ತಂಡದ ಕಪ್ತಾನನಾಗಿಯೂ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

" ಆದರೆ ಯೂನಿಸ್ 2011ರ ವಿಶ್ವಕಪ್‌ವರೆಗೆ ತಂಡವನ್ನು ಮುನ್ನಡೆಸುವ ದೂರದೃಷ್ಟಿ ಹೊಂದಿರುವುದರಿಂದ ಸದ್ಯದ ಮಟ್ಟಿಗೆ ಸಾಧ್ಯವಾಗುವುದು ಅನುಮಾನ" ಎಂಬುದು ಅಧಿಕಾರಿ ವಿವರಣೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments