Select Your Language

Notifications

webdunia
webdunia
webdunia
webdunia

ಐಸಿಸಿ ವಿಶ್ವ ಟ್ವೆಂಟಿ-20ಯಲ್ಲಿ ಭಾರತಕ್ಕೆ ಸ್ಥಾನವಿಲ್ಲ

ಐಸಿಸಿ ವಿಶ್ವ ಟ್ವೆಂಟಿ-20ಯಲ್ಲಿ ಭಾರತಕ್ಕೆ ಸ್ಥಾನವಿಲ್ಲ
ದುಬೈ , ಸೋಮವಾರ, 22 ಜೂನ್ 2009 (18:10 IST)
ಐಸಿಸಿ ಸೋಮವಾರ ಲಂಡನ್‌ನಲ್ಲಿ ಬಿಡುಗಡೆ ಮಾಡಿರುವ ವಿಶ್ವ ಟ್ವೆಂಟಿ-20 ಪುರುಷರ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನಿಗೂ ಸ್ಥಾನವಿಲ್ಲ. ಆದರೆ ಮಹಿಳೆಯರ ತಂಡದಲ್ಲಿ ರುಮೇಲಿ ಧಾರ್ ಸ್ಥಾನ ಪಡೆದಿದ್ದಾರೆ. ಪುರುಷರ ತಂಡದಲ್ಲಿ ಪಾಕಿಸ್ತಾನದ ನಾಲ್ವರು, ಶ್ರೀಲಂಕಾದ ಮೂವರು, ದಕ್ಷಿಣ ಆಫ್ರಿಕಾದ ಮೂವರು ಹಾಗೂ ಇಬ್ಬರು ವೆಸ್ಟ್‌ಇಂಡೀಸ್ ಕ್ರಿಕೆಟಿಗರನ್ನು ಹೆಸರಿಸಲಾಗಿದೆ.

ಈ ಬಾರಿಯ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವಿಫಲರಾಗಿದ್ದ 2007ರ ಚಾಂಪಿಯನ್ ಟೀಮ್ ಇಂಡಿಯಾದಿಂದ ಯಾವುದೇ ಆಟಗಾರನನ್ನು ಐಸಿಸಿ ವಿಶ್ವ ಟ್ವೆಂಟಿ-20 ಇಲೆವೆನ್ ತಂಡಕ್ಕೆ ಆರಿಸಲಾಗಿಲ್ಲ.

ಕ್ರಿಕೆಟ್‌ನ ಚುಟುಕು ಪ್ರಕಾರಕ್ಕೆ ಗುಡ್ ಬೈ ಹೇಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಯೂನಿಸ್ ಖಾನ್‌ರನ್ನು ವಿಶ್ವ ತಂಡಕ್ಕೂ ನಾಯಕನೆಂದು ಗುರುತಿಸಲಾಗಿದೆ. ಜತೆಗೆ ಅವರ ತಂಡದ ಆಲ್-ರೌಂಡರ್ ಶಾಹಿದ್ ಆಫ್ರಿದಿ ಮತ್ತು ವೇಗಿ ಉಮರ್ ಗುಲ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ವಿಕೆಟ್ ಕೀಪರ್ ಹಾಗೂ ದಾಂಡಿಗ ಕಮ್ರಾನ್ ಅಕ್ಮಲ್ ವಿಶ್ವ ತಂಡದಲ್ಲೂ ಅದೇ ಕಾರ್ಯವನ್ನು ನಿರ್ವಹಿಸುವ ಸ್ಥಾನದ ಗೌರವ ಪಡೆದಿದ್ದಾರೆ.

ಟೂರ್ನಮೆಂಟ್‌ನ ಆಟಗಾರ ಖ್ಯಾತಿಗೆ ಪಾತ್ರರಾಗಿರುವ ಶ್ರೀಲಂಕಾದ ತಿಲಕರತ್ನೆ ದಿಲ್‌ಶಾನ್‌ರವರು ಆರಂಭಿಕ ಆಟಗಾರನಾಗಿ ಸ್ಥಾನ ಪಡೆದಿದ್ದರೆ, ಅವರ ಜತೆಗಾರನಾಗಿ ವೆಸ್ಟ್‌ಇಂಡೀಸ್ ನಾಯಕ ಕ್ರಿಸ್ ಗೇಲ್‌‌ರನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಜಾಕ್ವಾಸ್ ಕ್ಯಾಲಿಸ್ ಮತ್ತು ಅಬ್ರಹಾಂ ಡೇ ವಿಲ್ಲರ್ಸ್ ಮಧ್ಯಮ ಕ್ರಮಾಂಕದ ದಾಂಡಿಗರೆಂದು ನಾಮಕರಣಗೊಂಡಿದ್ದಾರೆ.

ವೆಸ್ಟ್‌ಇಂಡೀಸ್ ಆಲ್-ರೌಂಡರ್ ದ್ವಾಯ್ನೆ ಬ್ರಾವೋ, ದಕ್ಷಿಣ ಆಫ್ರಿಕಾ ಯುವ ವೇಗಿ ವಾಯ್ನೆ ಪಾರ್ನೆಲ್, ಶ್ರೀಲಂಕಾ ಸ್ಪಿನ್ನರ್ ಅಜಂತಾ ಮೆಂಡಿಸ್ ಬೌಲಿಂಗ್ ಕ್ರಮದಲ್ಲಿ ಗುರುತಿಸಿಕೊಂಡರೆ, ಶ್ರೀಲಂಕಾದ ಲಸಿತ್ ಮಾಲಿಂಗ 12ನೇ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪುರುಷರ ತಂಡ ಇಂತಿದೆ: ಕ್ರಿಸ್ ಗೇಲ್, ತಿಲಕರತ್ನೆ ದಿಲ್‌ಶಾನ್, ಜಾಕ್ವಾಸ್ ಕ್ಯಾಲಿಸ್, ಅಬ್ರಹಾಂ ಡೇ ವಿಲ್ಲರ್ಸ್, ಯೂನಿಸ್ ಖಾನ್ (ಕಪ್ತಾನ), ದ್ವಾಯ್ನೆ ಬ್ರಾವೋ, ಶಾಹಿದ್ ಆಫ್ರಿದಿ, ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ವಾಯ್ನೆ ಪಾರ್ನೆಲ್, ಉಮರ್ ಗುಲ್, ಅಜಂತಾ ಮೆಂಡಿಸ್. 12ನೇ ಆಟಗಾರ ಲಸಿತ್ ಮಾಲಿಂಗ.

ಮಹಿಳೆಯರ ತಂಡ ಇಂತಿದೆ: ಚಾರ್ಲೊಟ್ಟೆ ಎಡ್ವರ್ಡ್ಸ್ (ಇಂಗ್ಲೆಂಡ್, ನಾಯಕಿ), ಸರಾಹ್ ಟೇಲರ್ (ಇಂಗ್ಲೆಂಡ್, ವಿಕೆಟ್ ಕೀಪರ್), ಶೆಲ್ಲಿ ನಿತ್ಸಾಚ್ಕೆ (ಆಸ್ಟ್ರೇಲಿಯಾ), ಕ್ಲಾರೆ ಟೇಲರ್ (ಇಂಗ್ಲೆಂಡ್), ಆಮೀ ವಾಟ್ಕಿನ್ಸ್ (ನ್ಯೂಜಿಲೆಂಡ್), ಸೂಜಿ ಬೇಟ್ಸ್ (ನ್ಯೂಜಿಲೆಂಡ್), ಲೂಸಿ ದೂಲನ್ (ನ್ಯೂಜಿಲೆಂಡ್), ರುಮೇಲಿ ಧಾರ್ (ಭಾರತ), ಲೌರಾ ಮಾರ್ಷ್ (ಇಂಗ್ಲೆಂಡ್), ಹೋಲಿ ಕೋಲ್ವಿನ್ (ಇಂಗ್ಲೆಂಡ್), ಸೈನ್ ರೂಕ್ (ನ್ಯೂಜಿಲೆಂಡ್). 12ನೇ ಆಟಗಾರ್ತಿ- ಇಶಾನಿ ಕೌಶಲ್ಯ (ಶ್ರೀಲಂಕಾ).

Share this Story:

Follow Webdunia kannada