Webdunia - Bharat's app for daily news and videos

Install App

ಯುವಿ, ಧೋನಿ, ಆರ್.ಪಿ., ಜಹೀರ್ ಕೂಡ ಗಾಯಾಳುಗಳಾಗಿದ್ರಂತೆ..!

ಟ್ವೆಂಟಿ-20 ವಿಶ್ವಕಪ್‌‌ ತಂಡ ಆಯ್ಕೆಗೂ ಮೊದಲೇ ವರದಿ ನೀಡಿದ್ದ ಫಿಸಿಯೋ

Webdunia
ಶುಕ್ರವಾರ, 19 ಜೂನ್ 2009 (17:26 IST)
PTI
ಟ್ವೆಂಟಿ-20 ವಿಶ್ವಕಪ್‌ನಿಂದ ಟೀಮ್ ಇಂಡಿಯಾ ಹೊರ ಬಿದ್ದ ನಂತರ ಸೃಷ್ಟಿಯಾಗಿದ್ದ ವಿವಾದಗಳು ತಣ್ಣಗಾಗುವ ಮೊದಲೇ ಬಿಸಿಸಿಐ ಮತ್ತೊಂದು ಬಾಂಬ್ ಎಸೆದಿದೆ. ಅದರ ಪ್ರಕಾರ ನಾಯಕ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಆರ್.ಪಿ. ಸಿಂಗ್ ಮತ್ತು ಜಹೀರ್ ಖಾನ್ ಗಾಯಾಳುಗಳಾಗಿಯೇ ಪ್ರವಾಸ ಕೈಗೊಂಡಿದ್ದರಂತೆ.

ಟೂರ್ನಮೆಂಟ್ ಆರಂಭಕ್ಕೂ ಮೊದಲು ಬಿಸಿಸಿಐಗೆ ನೀಡಿದ ವರದಿಯಲ್ಲಿ ದೈಹಿಕ ತಜ್ಞ ನಿತಿನ್ ಪಟೇಲ್ ಪ್ರಮುಖ ಐವರು ಆಟಗಾರರ ದೈಹಿಕ ಕ್ಷಮತೆ ದುರ್ಬಲವಾಗಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದರು. ಆದರೂ ಅವರೆಲ್ಲರನ್ನೂ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಮೂಲಗಳ ಪ್ರಕಾರ ಪಟೇಲ್ ನೀಡಿದ ವರದಿಯಲ್ಲಿ ನಾಯಕ ಧೋನಿ, ಸೆಹ್ವಾಗ್, ಯುವರಾಜ್, ಆರ್.ಪಿ. ಸಿಂಗ್, ಜಹೀರ್ ಗಾಯಾಳುಗಳಾಗಿದ್ದು ಚಿಕಿತ್ಸೆಯ ಅಗತ್ಯವಿದೆ ಎಂದು ಸಲಹೆ ನೀಡಿದ್ದರು.

ಆಯ್ಕೆ ಸಮಿತಿಯ ಸಭೆಗೂ ಮೊದಲು ಈ ವರದಿ ಬಂದಿರುವ ಹೊರತಾಗಿಯೂ ಬಿಸಿಸಿಐ ಗಾಯಾಳು ಆಟಗಾರರನ್ನೇ ತಂಡಕ್ಕೆ ಆರಿಸಲು ನಿರ್ಧರಿಸಿತ್ತು. ಇಂಗ್ಲೆಂಡ್‌ಗೆ ಟೂರ್ನಮೆಂಟ್‌ಗಾಗಿ ತೆರಳಲು ಮತ್ತೂ ಕಾಲಾವಕಾಶವಿದ್ದ ಕಾರಣ ಅದಕ್ಕೂ ಮೊದಲು ಆಟಗಾರರು ಸುಧಾರಿಸಿಕೊಳ್ಳಬಹುದು ಎಂಬುದು ಬಿಸಿಸಿಐ ಭರವಸೆಯಾಗಿತ್ತು.
PTI

ಆದರೆ ದೈಹಿಕ ತಜ್ಞರ ವರದಿಯನ್ನು 'ಮಾಮೂಲಿ ವರದಿ' ಎಂದು ಕೀಳಂದಾಜಿಸಿರುವ ಬಿಸಿಸಿಐ, ಆಟಗಾರರ ಗಾಯಗಳು ನಿಜಕ್ಕೂ ತೀರಾ ಸಾಮಾನ್ಯವಾಗಿದ್ದವು ಮತ್ತು ತಂಡದಿಂದ ಕೈ ಬಿಡುವುದಕ್ಕೆ ಸಮರ್ಥನೆ ನೀಡುವಂತಹುದ್ದಾಗಿರಲಿಲ್ಲ ಎಂದಿದೆ.

" ಪ್ರತಿ ಪ್ರವಾಸಕ್ಕೂ ಮೊದಲು ಆಟಗಾರರ ದೈಹಿಕ ಕ್ಷಮತೆಯ ಕುರಿತು ನೀಡಲಾಗುವ ಈ ವರದಿಯು ಸಾಮಾನ್ಯ ವರದಿಯೆಂದೇ ಪರಿಗಣಿಸಲಾಗುತ್ತದೆ. ಈ ವರದಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಬಗ್ಗೆ ಬೊಟ್ಟು ಮಾಡಲಾಗಿರಲಿಲ್ಲ" ಎಂದು ಬಿಸಿಸಿಐ ಮಾಧ್ಯಮ ಮತ್ತು ಹಣಕಾಸು ಸಮಿತಿ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

" ಫಿಸಿಯೋ ವರದಿ ಬಂದ ನಂತರ ಆಯ್ಕೆಗಾರರು ಆಟಗಾರರನ್ನು ಆರಿಸುತ್ತಾರೆ. ಕೆಲವು ಬಾರಿ ತೀರಾ ಸಾಮಾನ್ಯ ಗಾಯಗಳಷ್ಟೇ ಇಲ್ಲಿರುತ್ತದೆ. ಆಗ ಇಡೀ ಪ್ರವಾಸಕ್ಕೆ ಆಟಗಾರರನ್ನು ಪರಿಗಣಿಸದಿರಲು ಸಾಧ್ಯವಾಗುವುದಿಲ್ಲ. ಇಂತಹ ಗಾಯಗಳು ಮೂರು ಅಥವಾ ನಾಲ್ಕು ದಿನಗಳಲ್ಲಿ ಗುಣಪಡಿಸುವಂತಹವುಗಳು. ಹಾಗಾಗಿ ಅವರನ್ನು ಸಂಪೂರ್ಣ ಪ್ರವಾಸದಿಂದ ಹೊರಗಿಡಲಾಗದು. ಇದು ಸಾಮಾನ್ಯ ವರದಿಯಾಗಿದ್ದು ಅದರಲ್ಲಿ ಹೆಚ್ಚಿನದ್ದನ್ನು ನಮೂದಿಸಲಾಗಿಲ್ಲ" ಎಂದು ಅವರು ವಿವರಿಸಿದರು.
PTI

ದೈಹಿಕ ತಜ್ಞ ಪಟೇಲ್ ವರದಿಯ ಪ್ರಕಾರ ಧೋನಿಯವರು ಬೆನ್ನು ನೋವು ಅನುಭವಿಸುತ್ತಿದ್ದರು. ವೇಗಿ ಆರ್.ಪಿ. ಸಿಂಗ್ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದರೆ, ಸೆಹ್ವಾಗ್, ಯುವರಾಜ್ ಮತ್ತು ಜಹೀರ್ ಭುಜ ನೋವಿನ ಗಾಯಕ್ಕೊಳಗಾಗಿ ನರಳುತ್ತಿದ್ದರು.

ಪ್ರತಿಷ್ಠಿತ ಟೂರ್ನಮೆಂಟ್‌ನಿಂದ ಪ್ರವಾಸ ಮಾಡಿದ್ದ ಸೆಹ್ವಾಗ್ ಮಾತ್ರ ಹಿಂದಕ್ಕೆ ಸರಿದಿದ್ದರು. ಅವರ ಬದಲಿಗೆ ವಿಕೆಟ್-ಕೀಪರ್, ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ರನ್ನು ತಂಡಕ್ಕೆ ಸೇರಿಸಲಾಗಿತ್ತು. ಉಳಿದೆಲ್ಲಾ ಗಾಯಾಳು ಆಟಗಾರರನ್ನು ತಂಡದಲ್ಲೇ ಬಿಸಿಸಿಐ ಉಳಿಸಿಕೊಂಡಿತ್ತು.

ಆಸಕ್ತಿಕರ ವಿಚಾರವೆಂದರೆ ಧೋನಿಯೇ ಸ್ವತಃ ಈ ವಿಚಾರವನ್ನು ಪತ್ರಿಕಾಗೋಷ್ಠಿಯೊಂದರಲ್ಲಿ ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ ಎಂಟರಲ್ಲಿ ಸೋಲುಂಡ ನಂತರ ಮಾತನಾಡಿದ್ದ ನಾಯಕ, ತಂಡದ ಹಲವು ಆಟಗಾರರು ನೂರು ಪ್ರತಿಶತ ಕ್ಷಮತೆ ಹೊಂದಿರದ ಕಾರಣ ನೀಡಿದ್ದರು.

" ನಮ್ಮ ತಂಡದಲ್ಲಿ ಕೆಲವು ಮಂದಿ ಮಾತ್ರ 100 ಪ್ರತಿಶತ ಫಿಟ್ ಆಗಿದ್ದಾರೆ. ಉಳಿದಂತೆ ಕೆಲವರು ಹಿಮ್ಮಡಿ ಮತ್ತು ಭುಜ ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ಅಂಗಣದಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ತೋರಿಸಲು ಸಾಧ್ಯವಾಗಿಲ್ಲ. ಆದರೆ ಸೋಲಿಗೆ ಬಳಲಿಕೆ ಕಾರಣವಾಗಿಲ್ಲ ಎಂಬುದರ ಬಗ್ಗೆ ನನಗೆ ಸಂಪೂರ್ಣ ಖಚಿತತೆಯಿಲ್ಲ. ಈಗೀಗ ಪುನಶ್ಚೇತನಕ್ಕೆ ಹೆಚ್ಚಿನ ಅವಕಾಶಗಳು ಸಿಗುತ್ತಿರುವುದರಿಂದ 100 ಪ್ರತಿಶತ ಫಿಟ್‌ನೆಸ್ ಶೀಘ್ರವಾಗಿ ಕಂಡುಕೊಳ್ಳಬಹುದಾಗಿದೆ" ಎಂದು 12 ರನ್‌ಗಳಿಂದ ಹರಿಣಗಳೆದುರು ಪರಾಜಯ ಹೊಂದಿದ ನಂತರ ಮಂಗಳವಾರ ಧೋನಿ ಪ್ರತಿಕ್ರಿಯಿಸಿದ್ದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments