Webdunia - Bharat's app for daily news and videos

Install App

ಎಲೆ ಮರೆಯ ಕಾಯಿಯಾಗುಳಿದ ರಜಾಕ್ ಎಂಬ ಹೀರೋ

Webdunia
ಸೋಮವಾರ, 22 ಜೂನ್ 2009 (17:32 IST)
ಅಲ್ಲಿ ಅಜಂತಾ ಮೆಂಡಿಸ್‌ರನ್ನು ಪ್ರಶ್ನಿಸಲಾಯಿತು; ಶಾಹಿದ್ ಆಫ್ರಿದಿಯವರನ್ನು ಹೊಗಳಿ ಅಟ್ಟಕ್ಕೇರಿಸಲಾಯಿತು; ಮಹೇಲಾ ಜಯವರ್ಧನೆಯವರ ತಲ್ಲಣಗೊಂಡಿರುವ ಫಾರ್ಮ್ ಬಗ್ಗೆ ಆಶ್ಚರ್ಯವ್ಯಕ್ತಪಡಿಸಲಾಯಿತು. ಆದರೆ ಪಾಕಿಸ್ತಾನಕ್ಕೆ 17 ವರ್ಷಗಳ ನಂತರ ಮೊತ್ತ ಮೊದಲ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಬ್ದುಲ್ ರಜಾಕ್ ಬಗ್ಗೆ ಯಾರೂ ತುಟಿ ಬಿಚ್ಚಲಿಲ್ಲ.

ಆದರೆ ಇದ್ಯಾವುದೂ ಅವರಿಗೆ ಹೊಸತಲ್ಲ. 2005-06ರಲ್ಲಿನ ಟೆಸ್ಟ್ ಸರಣಿಯಲ್ಲಿನ ಕರಾಚಿ ಪಂದ್ಯವೊಂದರಲ್ಲಿ ಭಾರತವನ್ನು ಪಾಕಿಸ್ತಾನ ಮಣಿಸಿದಾಗಲೂ ಕಮ್ರಾನ್ ಅಕ್ಮಲ್‌ರನ್ನು ಮಾತ್ರ ಪ್ರಶಂಸಿಸಲಾಯಿತು. ಆ ಪಂದ್ಯದಲ್ಲಿ 45 ಮತ್ತು 90 ರನ್‌ಗಳನ್ನು ಗಳಿಸಿದ್ದಲ್ಲದೆ ಏಳು ವಿಕೆಟ್ ಕೂಡ ಪಡೆದಿದ್ದ ರಜಾಕ್‌ರನ್ನು ಯಾರೂ ನೆನಪಿಸಿಕೊಂಡಿರಲಿಲ್ಲ.
PR

ಇದೇ ಲಾರ್ಡ್ಸ್‌ನಲ್ಲಿ ಭಾನುವಾರ ಪುನರಾವರ್ತನೆಯಾಗಿದೆ. ಮೊದಲ ಮೂರು ಓವರುಗಳಲ್ಲಿ ರಜಾಕ್ ಪ್ರಮುಖ ಮೂರು ವಿಕೆಟ್‌ಗಳನ್ನು ಕಿತ್ತಿದ್ದರು. ಜೆಹಾನ್ ಮುಬಾರಕ್ (0), ಸನತ್ ಜಯಸೂರ್ಯ (17) ಮತ್ತು ಮಹೇಲಾ ಜಯವರ್ಧನೆ (1)ರೆಂಬ ಅತಿರಥ ಮಹಾರಥರನ್ನೇ ಅವರು ಪೆವಿಲಿಯನ್‌ಗಟ್ಟಿದ್ದರು. ಆ ಮೂಲಕ ಶ್ರೀಲಂಕಾ 32 ರನ್ನುಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ತಲುಪಿತ್ತು.

ಆದರೂ ಅವರನ್ನು ಯಾರೂ ಕ್ಯಾರೇ ಅಂದಿಲ್ಲ. ತಂಡದಲ್ಲಿಲ್ಲದ ಸಂದರ್ಭದಲ್ಲೂ ಅವರಂತಹ ಪ್ರತಿಭೆಯನ್ನು ಯಾರೂ ನೆನಪಿಸಿಕೊಂಡಿಲ್ಲ. ಯಾಸಿರ್ ಅರಾಫತ್ ಗಾಯಾಳುವಾದ ಕಾರಣ ಟ್ವೆಂಟಿ-20 ವಿಶ್ವಕಪ್ ಆರಂಭವಾದ ಮೇಲೆ ರಜಾಕ್ ತಂಡಕ್ಕೆ ಸೇರ್ಪಗೆಗೊಳಿಸಲಾಗಿತ್ತು. ಐಸಿಎಲ್ ಬಂಡಾಯ ಲೀಗ್‌ನಿಂದ ಹೊರ ಬಂದಿದ್ದ ಅವರನ್ನು ಪಿಸಿಬಿ ಸೇರಿಸಿಕೊಂಡು ಐಸಿಸಿ ಅನುಮೋದನೆಗೆ ಕೋರಿತ್ತು. ಐಸಿಸಿ ಒಪ್ಪಿಗೆ ನೀಡಿದ ನಂತರ ರಜಾಕ್ ಪಾಕ್ ತಂಡವನ್ನು ತಡವಾಗಿ ಸೇರಿದ್ದರು.

ಐಸಿಎಲ್‌ನಿಂದ ವಾಪಸಾದ ಮೊತ್ತ ಮೊದಲ ಆಟಗಾರ ಎಂಬ ಖ್ಯಾತಿಯೊಂದಿಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅವರು ನಾಲ್ಕು ಪಂದ್ಯಗಳನ್ನಾಡಿದ್ದು ಫೈನಲ್‌ನ ಮೂರು ವಿಕೆಟ್ ಸೇರಿದಂತೆ ಒಟ್ಟು ಐದು ವಿಕೆಟ್ ಕಿತ್ತಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಅವರು ಸಫಲರಾಗಿರಲಿಲ್ಲ.

ಆದರೆ ಫೈನಲ್‌ನಲ್ಲಿ ಅಜೇಯ 54 ರನ್ ಗಳಿಸಿದ ಶಾಹಿದ್ ಆಫ್ರಿದಿಯವರೇ ಪಂದ್ಯವನ್ನು ಗೆಲ್ಲಿಸಿದ್ದು ಎಂಬ ರೀತಿಯಲ್ಲಿ ಅವರೊಬ್ಬರನ್ನೇ ಅಪಾದಮಸ್ತಕ ಹೊಗಳಲಾಗುತ್ತಿದೆ. ಇತರ ಯಾರ ಶ್ರಮವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ.

ಆದರೂ ರಜಾಕ್ ಈ ಬಗ್ಗೆ ಯಾವುದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿಲ್ಲ. ಬಂಡಾಯ ಲೀಗ್ ಸೇರಿಕೊಂಡು ನಿಷೇಧವನ್ನೂ ಹೇರಿಕೊಂಡಿದ್ದ ಅವರು ಈಗಷ್ಟೇ ಮುಖ್ಯವಾಹಿನಿಗೆ ಸೇರಿಕೊಂಡಿದ್ದರಿಂದ ತಂಡದ ಜತೆ ಹೊಂದಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments