Select Your Language

Notifications

webdunia
webdunia
webdunia
webdunia

ಸಿಎಎಸ್ ನಿಷೇಧ ಪುನರ್ಪರಿಶೀಲನೆ ಮಾಡದಿದ್ದರೆ ವೃತ್ತಿಜೀವನ ಮುಗಿದಂತೆ: ನರಸಿಂಗ್

ಸಿಎಎಸ್ ನಿಷೇಧ ಪುನರ್ಪರಿಶೀಲನೆ  ಮಾಡದಿದ್ದರೆ ವೃತ್ತಿಜೀವನ ಮುಗಿದಂತೆ: ನರಸಿಂಗ್
ನವದಹೆಲಿ , ಮಂಗಳವಾರ, 23 ಆಗಸ್ಟ್ 2016 (13:51 IST)
ಕ್ರೀಡಾ ನ್ಯಾಯಾಲಯ ತಮ್ಮ ವಿರುದ್ಧ ಹೇರಿದ ನಾಲ್ಕು ವರ್ಷಗಳ ನಿಷೇಧ ಪುನರ್ಪರಿಶೀಲನೆ ಮಾಡದಿದ್ದರೆ ತಮ್ಮ ವೃತ್ತಿಜೀವನ ಮುಗಿದಂತೆಯೇ ಎಂದು ಕುಸ್ತಿಪಟು ನರಸಿಂಗ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
 
 ನಾಡಾ ನರಸಿಂಗ್ ಯಾದವ್‌‍ಗೆ ಕ್ಲೀನ್ ಚಿಟ್ ನೀಡಿದ ಬಳಿಕ ವಾಡಾ ಆ ತೀರ್ಪನ್ನು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಸಿಎಎಸ್  ನರಸಿಂಗ್ ಅವರಿಗೆ 74 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಪ್ರಾತಿನಿಧ್ಯಕ್ಕೆ ನಿಷೇಧಿಸಿತ್ತು.
 
ಈ ನಿಷೇಧದಿಂದ ನನಗೆ ಮಾತ್ರ ಕಳಂಕ ತಟ್ಟಿಲ್ಲ. ಇಡೀ ರಾಷ್ಟ್ರದ ಕೀರ್ತಿಗೆ ಕಪ್ಪು ಚುಕ್ಕೆಯಾಗಿದೆ. ನನ್ನ ನಿಷೇಧ ಪುನರ್ಪರಿಶೀಲನೆ ಮಾಡದಿದ್ದರೆ, ಅಮಾಯಕ ವ್ಯಕ್ತಿಗೆ ಜೀವನಪರ್ಯಂತ ಕಳಂಕ ಅಂಟಿಸಿದ ಹಾಗಾಗುತ್ತದೆ ಎಂದರು. ತನಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೆ ಭಾರತ ರಿಯೊ ಒಲಿಂಪಿಕ್ಸ್‌ನಲ್ಲಿ ಖಂಡಿತವಾಗಿ ಇನ್ನೊಂದು ಪದಕ ಗೆಲ್ಲುತ್ತಿತ್ತು ಎಂದು ನರಸಿಂಗ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪಿ.ವಿ. ಸಿಂಧು ಪೂರ್ಣ ಸಾಮರ್ಥ್ಯವಿನ್ನೂ ಸಾಧಿಸಬೇಕು: ಪುಲ್ಲೇಲಾ ಗೋಪಿಚಂದ್