Select Your Language

Notifications

webdunia
webdunia
webdunia
webdunia

ಪಿ.ವಿ.ಸಿಂಧುಗೆ ಐಫೋನ್ ವಾಪಸ್ ನೀಡಿ, ಐಸ್‌ಕ್ರೀಂ ತಿನ್ನಲು ಅನುಮತಿ ನೀಡಿದ ಗೋಪಿಚಂದ್

ಪಿ.ವಿ.ಸಿಂಧುಗೆ ಐಫೋನ್ ವಾಪಸ್ ನೀಡಿ, ಐಸ್‌ಕ್ರೀಂ ತಿನ್ನಲು ಅನುಮತಿ ನೀಡಿದ ಗೋಪಿಚಂದ್
ರಿಯೋ ಡಿ ಜನೈರೋ , ಶನಿವಾರ, 20 ಆಗಸ್ಟ್ 2016 (15:30 IST)
ರಿಯೋ ಒಲಿಂಪಿಕ್ಸ್ ಪಂದ್ಯಾವಳಿಗಾಗಿ ಪಿ.ವಿ.ಸಿಂಧು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಗೋಪಿಚಂದ್ ಆಕಾಡೆಮಿ ಶಿಸ್ತಿಗೆ ತುಂಬಾ ಹೆಸರುವಾಸಿಯಾಗಿದೆ. ಅದು ಸೈನಾ ಆಗಿರಲಿ ಅಥವಾ ಸಿಂಧು ಆಗಿರಲಿ ಪ್ರತಿಯೊಬ್ಬರು ಶಿಸ್ತು ಪಾಲಿಸಲೇಬೇಕು.



















ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧುಗೆ ತನ್ನ ಐಫೋನ್ ಮತ್ತು ಐಸ್‌ಕ್ರೀಂ ತಿನ್ನುವುದು ತುಂಬಾ ಅಚ್ಚುಮೆಚ್ಚು. ಆದರೆ, ಕಳೆದ ಎರಡು ತಿಂಗಳುಗಳಿಂದ ಕೋಚ್ ಗೋಪಿಚಂದ್, ಸಿಂಧುಗೆ ಫೋನ್ ಮತ್ತು ಐಸ್‌ಕ್ರೀಂನಿಂದ ದೂರವಿರುವಂತೆ ಆದೇಶ ನೀಡಿದ್ದರು ಎನ್ನಲಾಗಿದೆ.    
 
ಹೈದರಾಬಾದ್ ಮೂಲದವರಾದ ಸಿಂಧೂಗೆ ಹೈದರಾಬಾದ್ ಬಿರಿಯಾನಿ, ಚಾಕೋಲೇಟ್ ಮತ್ತು ಐಸ್ ಕ್ರೀಂ ಎಂದರೆ ಪಂಚ ಪ್ರಾಣವಂತೆ. ಆದರೆ ಕೋಚ್ ಗೋಪಿಚಂದ್ ಈ ಮೂರು ವಸ್ತುಗಳನ್ನು  ಅವರಿಂದ ದೂರವಿಟ್ಟಿದ್ದರಂತೆ. ಅಲ್ಲದೆ ಅವರ ಐಪೋನ್ ಅನ್ನು ಕೂಡ ಗೋಪಿಚಂದ್ ಕಸಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
 
ಇದೀಗ ರಿಯೋ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಸ್ಪರ್ಧೆ ಅಂತ್ಯಗೊಂಡಿದ್ದರಿಂದ ಸಿಂಧುಗೆ ಐಫೋನ್ ವಾಪಸ್ ನೀಡಿದ ಗೋಪಿಚಂದ್, ಐಸ್‌ಕ್ರೀಂ ಮತ್ತು ಬಿರಿಯಾನಿ ತಿನ್ನಲು ಅನುಮತಿ ನೀಡಿದ್ದಾರಂತೆ. ವಾಟ್ಸಪ್‌‌ ಕೂಡಾ ಬಳಸಲು ಗ್ರೀನ್ ಸಿಗ್ನಲ್ ನೀಡಿದ್ದರಿಂದ ಸಿಂಧು ಸಂತಸಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಿಷ್ಪಕ್ಷಪಾತ ತನಿಖೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ: ನರಸಿಂಗ್ ಯಾದವ್