Select Your Language

Notifications

webdunia
webdunia
webdunia
webdunia

ಸಾಕ್ಷಿಗೆ ಬಹುಮಾನ ನೀಡಲು ಡಬ್ಲ್ಯುಎಫ್‌ಐ ಬಳಿ ಹಣವಿಲ್ಲ

ಸಾಕ್ಷಿಗೆ ಬಹುಮಾನ ನೀಡಲು ಡಬ್ಲ್ಯುಎಫ್‌ಐ ಬಳಿ ಹಣವಿಲ್ಲ
ಮುಂಬೈ: , ಶನಿವಾರ, 27 ಆಗಸ್ಟ್ 2016 (15:23 IST)
ಹರ್ಯಾಣ ಸರ್ಕಾರ ಮತ್ತು ಇತರೆ ಸಂಘಟನೆಗಳು ರಿಯೊದಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್ ಅವರಿಗೆ ಬಹುಮಾನಗಳ ಮಳೆಗರೆದಿರಬಹುದು. ಆದರೆ ಸಾಕ್ಷಿ ಮಾತೃ ಸಂಸ್ಥೆ ಭಾರತ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಎ) ದಿಂದ ಸಾಕ್ಷಿಗೆ ಬೆನ್ನು ತಟ್ಟಿ ಶಹಭಾಷ್‌‍ಗಿರಿ ನೀಡಿದ್ದು ಬಿಟ್ಟರೆ ಬೇರೆ ಏನನ್ನೂ ನಿರೀಕ್ಷೆ ಮಾಡುವಂತಿರಲಿಲ್ಲ.

ರಾಜ್ಯ ಸರ್ಕಾರವು ಮಲಿಕ್‌ಗೆ 2.5 ಕೋಟಿ ನಗದು ಬಹಮಾನ ನೀಡಿ ಸನ್ಮಾನಿಸಿತು. ಆದರೆ ಸಾಕ್ಷಿಯ ಐತಿಹಾಸಿಕ ಸಾಧನೆಗಾಗಿ ಅವರಿಗೆ ಬಹುಮಾನ ನೀಡಲು ತಮ್ಮಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ ಎಂದು ಹಣದ ಮುಗ್ಗಟ್ಟಿಗೆ ಸಿಕ್ಕಿದ ಡಬ್ಲ್ಯುಎಫ್‌ಐ ತಿಳಿಸಿದೆ.
 
ಉತ್ತರಪ್ರದೇಶದ ಗೊಂಡಾದಿಂದ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಾಕ್ಷಿಗೆ ಬಹುಮಾನ ನೀಡಲು ನಮ್ಮ ಬಳಿ ಹಣವಿಲ್ಲ ಎಂದು ನೇರವಾಗಿ ಹೇಳಿದರು. ಇದರಿಂದ ಒಕ್ಕೂಟದ ಸ್ಥಿತಿಗತಿಯ ಬಗ್ಗೆ ಆಘಾತಕಾರಿ ಅಂಶ ಬಹಿರಂಗವಾಗಿದೆ. ಇದಕ್ಕೆ ವಿರುದ್ಧವಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ರಿಯೊ ಬೆಳ್ಳಿಪದಕ ವಿಜೇತ ಪಿವಿ ಸಿಂಧುಗೆ50 ಲಕ್ಷ ಬಹುಮಾನ ಘೋಷಿಸಿದೆ. ಗೊಂಡಾದ ಬಿಜೆಪಿ ಸಂಸದ ಸಿಂಗ್ ಕುಸ್ತಿ ಕ್ರೀಡೆಗೆ ಹಣಕಾಸಿನ ಬೆಂಬಲದ ಕೊರತೆಯಿದೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಧ್ಯಾನ್‌ಚಂದ್‌ಗೆ ಭಾರತರತ್ನ: ಹಾಕಿಯ ಲೆಜೆಂಡ್‌ಗಳ ಸಭೆ