Select Your Language

Notifications

webdunia
webdunia
webdunia
webdunia

ಭಾರತದ ಒಲಿಂಪಿಕ್ ಸಂಭ್ರಮಾಚರಣೆ: ಮಾರ್ಗನ್ ಟ್ವೀಟ್‌ಗೆ ಸೆಹ್ವಾಗ್ ತಿರುಗೇಟು

ಭಾರತದ ಒಲಿಂಪಿಕ್ ಸಂಭ್ರಮಾಚರಣೆ:  ಮಾರ್ಗನ್ ಟ್ವೀಟ್‌ಗೆ ಸೆಹ್ವಾಗ್ ತಿರುಗೇಟು
ನವದೆಹಲಿ: , ಗುರುವಾರ, 25 ಆಗಸ್ಟ್ 2016 (10:25 IST)
ರಿಯೊ ಒಲಿಂಪಿಕ್ಸ್‌‌ನಲ್ಲಿ ಎರಡು ಪದಕಗಳ ಗೆಲುವಿಗೆ ಭಾರತ ಭಾರೀ ಸಂಭ್ರಮಾಚರಣೆ ಮಾಡುತ್ತಿರುವುದಕ್ಕೆ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮಾರ್ಗನ್ ವ್ಯಂಗ್ಯಾತ್ಮಕ ಟ್ವೀಟ್‌ಗಳನ್ನು ಮಾಡಿದ್ದು ಕ್ರಿಕೆಟ್ ಸ್ಟಾರ್ ವೀರೇಂದ್ರ ಸೆಹ್ವಾಗ್ ಮತ್ತು ಪಿಯರ್ಸ್ ಮಾರ್ಗನ್ ನಡುವೆ ತೀಕ್ಷ್ಣ ವಾಕ್ಸಮರಕ್ಕೆ ಕಾರಣವಾಯಿತು.
 
ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಸೆಹ್ವಾಗ್ ಮಾರ್ಗನ್ ಅವರಿಗೆ ಟ್ವಿಟರ್‌ನಲ್ಲಿ , "ಭಾರತ ಪ್ರತಿಯೊಂದು ಸಣ್ಣ ಸಂತೋಷದ ಗಳಿಗೆಯನ್ನು ಅಭಿಮಾನದಿಂದ ಆಚರಿಸುತ್ತದೆ. ಆದರೆ ಕ್ರಿಕೆಟ್ ಕ್ರೀಡೆಯನ್ನು ಆವಿಷ್ಕಾರ ಮಾಡಿದ ಇಂಗ್ಲೆಂಡ್ ಇನ್ನೂ ವಿಶ್ವ ಕಪ್ ಜಯಿಸಿಲ್ಲವೆಂಬುದು ನೆನಪಿರಲಿ'' ಎಂದು ತಿರುಗೇಟು ನೀಡಿದ್ದಾರೆ.
 
 ಸೆಹ್ವಾಗ್ ಪ್ರತಿಕ್ರಿಯೆ ತಕ್ಷಣವೇ ಟ್ವಿಟರ್‌ನಲ್ಲಿ ವೈರಲ್ ಆಗಿ 2 ಗಂಟೆಗಳಲ್ಲಿ 5000 ಮರುಟ್ವೀಟ್‌ಗಳು ಮತ್ತು 5600 ಲೈಕ್‌ಗಳು ಬಂದಿದ್ದವು.
 
 ಆದರೆ ಅಷ್ಟು ಸುಲಭವಾಗಿ ತಲೆಭಾಗದ ಮಾರ್ಗನ್ ಪ್ರತಿಟ್ವೀಟ್ ಮಾಡಿ ಕೆವಿನ್ ಪೀಟರ್‌ಸನ್ ಇನ್ನೂ ಆಡುತ್ತಿದ್ದರೆ, ಇಂಗ್ಲೆಂಡ್ ವಿಶ್ವಕಪ್ ಜಯಿಸುತ್ತಿತ್ತು ಎಂದರು.
 
ಆಗ ಬ್ರಿಟಿಷ್ ಪತ್ರಕರ್ತರಿಗೆ ನೆನಪಿಸಿದ ಸೆಹ್ವಾಗ್, ಪೀಟರ್‌ಸನ್ ಮೂಲತಃ ದಕ್ಷಿಣ ಆಫ್ರಿಕಾಗೆ ಸೇರಿದ್ದು, 2007ರ ವಿಶ್ವಕಪ್‌ನಲ್ಲಿ ಪೀಟರ್‌ಸನ್ ಆಡಿದ್ದರೂ ಇಂಗ್ಲೆಂಡ್ ಸೋತಿದೆ, ನಮ್ಮ ಜನರು ಸಂಭ್ರಮಾಚರಣೆ ಮಾಡಿದರೆ ನಿಮಗೇನು ಸಮಸ್ಯೆ  ಎಂದು ಟ್ವೀಟ್ ಮಾಡಿದರು.
 
 1.2 ಶತಕೋಟಿ ಜನಸಂಖ್ಯೆಯ ದೇಶ 2 ''ಸೋತ'' ಪದಕಗಳಿಗೆ ಸಂಭ್ರಮಾಚರಣೆ ಮಾಡುತ್ತಿರುವುದು ಎಷ್ಟೊಂದು ಮುಜುಗರದ ಸಂಗತಿ ಎಂದು ಮಾರ್ಗನ್ ಟ್ವೀಟ್ ಮಾಡಿದ್ದು ಇಷ್ಟೆಲ್ಲಾ ರಗಳೆಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ವಿರುದ್ಧ ಅಸಂಖ್ಯಾತ ದೂರುಗಳು: ಲೋಧಾ ಸಮಿತಿ ತುರ್ತು ಸಭೆ