Webdunia - Bharat's app for daily news and videos

Install App

ಬಾಕ್ಸಿಂಗ್ ತಾರೆ ವಿಜೇಂದರ್‌ಗೆ ಆಂಡ್ರೆಜ್ ವಿರುದ್ಧ ವಿರೋಚಿತ ಜಯ

Webdunia
ಶನಿವಾರ, 14 ಮೇ 2016 (15:09 IST)
ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿದ್ದು, ಪೋಲೆಂಡ್ ಆಂಡ್ರೆಜ್ ಸೋಲ್ಡ್ರಾ ವಿರುದ್ಧ ಶುಕ್ರವಾರ ಸತತ 6ನೇ ನಾಕೌಟ್ ಜಯ ಸಾಧಿಸಿದ್ದಾರೆ. ತಮ್ಮ ವೃತ್ತಿಪರ ಬಾಕ್ಸಿಂಗ್ ವೃತ್ತಿಜೀವನದಲ್ಲಿ 8 ನೇ ಸುತ್ತಿನ ಸ್ಪರ್ಧೆ ಎದುರಿಸಿದ ವಿಜೇಂದರ್, ಮೂರನೇ ಸುತ್ತಿಗೆ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಇನ್ನೊಂದು ಜಯ ಸಾಧಿಸಿದರು.

ನಾನು ರಿಂಗ್ ಪ್ರವೇಶಿಸಿದಾಗ ಕೋಚ್ ನನಗೆ ಸಹನೆಯಿಂದ ಇರುವಂತೆಯೂ ನಿನ್ನ ಸಹಜ ಆಟವನ್ನು ಆಡುವಂತೆ ತಿಳಿಸಿದ್ದರು. ಮೊದಲ ಎಂಟು ಸುತ್ತು ಗೆದ್ದಿದ್ದರಿಂದ, ನನ್ನ ವಿಶ್ವಾಸದ ಮಟ್ಟವು ಮೇಲೇರಿದ್ದು, ಇದು ಟೈಟಲ್ ಫೈಟ್‌ನಲ್ಲಿ ಒಂದು ಹೆಜ್ಜೆ ಮುಂದೆ ಎಂದು ವಿಜೇಂದರ್ ಸೆಣೆಸಾಟದ ಬಳಿಕ ಹೇಳಿದ್ದಾರೆ. 
 
 ಸೋಲ್ಡ್ರಾ  16 ಸೆಣಸಾಟದಲ್ಲಿ ಕೇವಲ 3 ಬಾರಿ ಸೋಲಿನ ರುಚಿ ಕಂಡಿದ್ದು, ವಿಜೇಂದರ್‌ಗೆ ಹಾರರ್ ಶೋ ನೀಡುವುದಾಗಿ ಹೇಳಿದ್ದರು.
 
ಸೋಲ್ಡ್ರಾ ಅವರ 81 ಸುತ್ತಿನ ಅನುಭವವು ಹರ್ಯಾಣದ ಆರಡಿ ಎತ್ತರದ ವಿಜೇಂದರ್‌ ಅವರನ್ನು ಧೃತಿಗೆಡಿಸದೇ ಮೊದಲ ಸುತ್ತಿನಲ್ಲೇ ಸೋಲ್ಡ್ರಾ ಮುಖಕ್ಕೆ ಬಲವಾದ ಪ್ರಹಾರ ನೀಡಿ ಕೆಳಕ್ಕೆ ಬೀಳಿಸಿದ್ದರು. 30 ವರ್ಷ ವಯಸ್ಸಿನ ಭಾರತೀಯ ದೆಹಲಿಯ ಸ್ವದೇಶಿ ಅಖಾಡಾದಲ್ಲಿ ಡಬ್ಲ್ಯುಬಿಒ ಏಷ್ಯಾ ಟೈಟಲ್ ಬೆಲ್ಟ್‌ಗಾಗಿ ಹೋರಾಟ ನಡೆಸಲಿದ್ದಾರೆ.   ವಿಜೇಂದರ್ ಅವರ ಶಕ್ತಿಶಾಲಿ ಬಲಗೈ ಪ್ರಹಾರಗಳಿಗೆ ತತ್ತರಿಸಿದ ಸೋಲ್ಡ್ರಾ ಮೂರನೇ ಸುತ್ತಿನಲ್ಲಿ ನಿಲ್ಲುವುದಕ್ಕೆ ಕೂಡ ತಿಣುಕಾಡುತ್ತಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments