Webdunia - Bharat's app for daily news and videos

Install App

ಪಾಕಿಸ್ತಾನಿಯರು ಯುದ್ಧ ಆಯ್ಕೆಮಾಡಿದಲ್ಲಿ ನಾವು ಯುದ್ಧಕ್ಕೆ ಸಿದ್ಧ: ವಿಜೇಂದರ್ ಸಿಂಗ್

Webdunia
ಭಾನುವಾರ, 18 ಸೆಪ್ಟಂಬರ್ 2016 (15:40 IST)
ಉತ್ತರ ಕಾಶ್ಮಿರದ ಉರಿ ಪಟ್ಟಣದ ಸೇನಾ ಕಚೇರಿಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯೆ ನೀಡಿದ ಬಾಕ್ಸರ್ ವಿಜೇಂದರ್ ಸಿಂಗ್, ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, ಒಂದು ವೇಳೆ ಪಾಕಿಸ್ತಾನಿಯರು ಯುದ್ಧವನ್ನು ಆಯ್ಕೆ ಮಾಡಿಕೊಂಡಲ್ಲಿ ನಾವು ಯುದ್ಧಕ್ಕೆ ಸಿದ್ದ ಎಂದು ಘೋಷಿಸಿದ್ದಾರೆ.  
 
ಉತ್ತರ ಕಾಶ್ಮಿರದ ಉರಿ ಪಟ್ಟಣದ ಬಳಿಯಿರುವ ಸೇನಾ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 17 ಯೋಧರು ಮತ್ತು ನಾಲ್ವರು ಉಗ್ರರು ಹತರಾಗಿದ್ದಾರೆ. 
 
ಉರಿ ಪಟ್ಟಣದಲ್ಲಿರುವ ಸೇನಾ ಮುಖ್ಯ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಸೇನಾ ಕಚೇರಿಯೊಳಗೆ ಮೂವರು ಉಗ್ರರು ಇರಬಹುದು ಎಂದು ಶಂಕಿಸಲಾಗಿದ್ದು ಗುಂಡಿನ ಕಾಳಗ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ಕಳೆದ 2014ರ ಡಿಸೆಂಬರ್ 5 ರಂದು ಉರಿಪಟ್ಟಣದಲ್ಲಿರುವ ಸೇನಾ ಕಚೇರಿಯ ಮೇಲೆ ದಾಳಿ ನಡೆಸಿ ಅಟ್ಟಹಾಸವನ್ನು ಮೆರೆದಿದ್ದ ಉಗ್ರರನ್ನು ಸೇನಾಪಡೆಗಳು ಹತ್ಯೆಗೈದಿದ್ದವು.
 
ಪಾಕಿಸ್ತಾನದ ಸಲಾಮಾಬಾದ್ ನಾಲ್ಲಾ ಪ್ರದೇಶದ ಮೂಲಕ ಉರಿ ಪಟ್ಟಣವನ್ನು ಉಗ್ರರು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದ್ದು, ಸಂಪೂರ್ಣ ಪ್ರದೇಶವನ್ನು ಸೇನಾಪಡೆಗಳು ಸುತ್ತುವರಿದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs CSK IPL 2025: ಇಂದಿನ ಮ್ಯಾಚ್ ಟಿಕೆಟ್ ತಗೊಂಡವರಿಗೆ ಶಾಕ್ ಗ್ಯಾರಂಟಿ

Virat Kohli: ಯಡವಟ್ಟಾಯ್ತು... ನಟಿ ಅವನೀತ್ ಕೌರ್ ಪೋಸ್ಟ್ ಗೆ ಲೈಕ್ ಮಾಡಿದ್ರಾ ವಿರಾಟ್ ಕೊಹ್ಲಿ: ಕ್ರಿಕೆಟಿಗ ಕೊಟ್ಟ ಸ್ಪಷ್ಟನೆ ಏನು

Shubman Gill: ರನೌಟ್ ಕೊಟ್ಟಿದ್ದಕ್ಕೂ ಜಗಳ, ಎಲ್ ಬಿಡಬ್ಲ್ಯು ಕೊಡದೇ ಇದ್ದಿದ್ದಕ್ಕೂ ಕಿತ್ತಾಟ: ಶುಬ್ಮನ್ ಗಿಲ್ ಕಾಳಗದ ವಿಡಿಯೋ

India Pakistan: ಪಾಕಿಸ್ತಾನದ ಕ್ರಿಕೆಟಿಗರು ಬಿಡಿ, ಕ್ರಿಕೆಟಿಗ ಇನ್ ಸ್ಟಾಗ್ರಾಂ ಖಾತೆಗೂ ಭಾರತದಲ್ಲಿ ನೋ ಎಂಟ್ರಿ

IPL 2025: ಟೈಟನ್ಸ್‌ ವಿರುದ್ಧ ಸೋಲಿನೊಡನೆ ಟೂರ್ನಿಯಿಂದ ಹೊರಬಿದ್ದ ಸನ್‌ರೈಸರ್ಸ್‌

ಮುಂದಿನ ಸುದ್ದಿ
Show comments