Select Your Language

Notifications

webdunia
webdunia
webdunia
webdunia

ಉದ್ದೀಪನ ಮದ್ದು ಸೇವನೆಯ ಸಿಎಎಸ್ ತೀರ್ಪು ವಿಳಂಬ: ಶರಪೋವಾ ಒಲಿಂಪಿಕ್ಸ್ ಕನಸು ಭಗ್ನ

ಉದ್ದೀಪನ ಮದ್ದು ಸೇವನೆಯ ಸಿಎಎಸ್ ತೀರ್ಪು ವಿಳಂಬ: ಶರಪೋವಾ ಒಲಿಂಪಿಕ್ಸ್ ಕನಸು ಭಗ್ನ
ಲುಸಾನೆ: , ಸೋಮವಾರ, 11 ಜುಲೈ 2016 (19:24 IST)
ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿ 2 ವರ್ಷಗಳ ನಿಷೇಧದ ಶಿಕ್ಷೆಗೆ ಗುರಿಯಾಗಿರುವ ಮಾರಿಯಾ ಶರಪೋವಾ ಅವರ ಶಿಕ್ಷೆ ಕುರಿತು ಪಂಚಾಯಿತಿ ಮಾಡುವ ಸಿಎಎಸ್ ತೀರ್ಪನ್ನು 2 ತಿಂಗಳು ಮುಂದೂಡಿ ಸೆಪ್ಟೆಂಬರ್‌ಗೆ ನಿಗದಿಮಾಡಿದ್ದರಿಂದ ಶರಪೋವಾ ರಿಯೊ ಒಲಿಂಪಿಕ್ ಕನಸು ಭಗ್ನಗೊಂಡಿದೆ.

ಟೆನ್ನಿಸ್‌ನಲ್ಲಿ ದೊಡ್ಡ ಹೆಸರಾಗಿದ್ದ ಶರಪೋವಾ ಆಸ್ಟ್ರೇಲಿಯನ್ ಓಪನ್ ಸಂದರ್ಭದಲ್ಲಿ ನಿಷೇಧಿತ ಮದ್ದು ಮೆಲ್ಡೊನಿಯಂಗೆ ಪಾಸಿಟಿವ್ ಫಲಿತಾಂಶ ಬಂದಿತ್ತು.  ಇದರಿಂದ ಶರಪೋವಾ ಖ್ಯಾತಿಗೆ ಅಗಾಧ ಪೆಟ್ಟು ಬಿದ್ದಿತ್ತು.
 
 ಜುಲೈ 18ರಂದು ತೀರ್ಪನ್ನು ನಿರೀಕ್ಷಿಸಲಾಗಿತ್ತು. ಯಶಸ್ವಿ ಅಪೀಲಿನಿಂದ ರಿಯೊದಲ್ಲಿ ರಷ್ಯಾದ ಟೆನಿಸ್ ತಂಡವನ್ನು ಸೇರಲು ಅವಕಾಶ ಸಿಗುತ್ತದೆಂದು ಶರಪೋವಾ ಆಶಿಸಿದ್ದರು. ಆಗಸ್ಟ್ 5ರಂದು ಆರಂಭವಾಗುವ ರಿಯೊ ಒಲಿಂಪಿಕ್ಸ್‌ನಲ್ಲಿ ರಷ್ಯಾದ ಟ್ರಾಕ್ ಮತ್ತು ಫೀಲ್ಡ್ ತಂಡವನ್ನು ಕೂಡ ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ನಿಷೇಧಿಸಲಾಗಿದ್ದು, ರಷ್ಯಾದ ಉಳಿದ ಸ್ಪರ್ಧಿಗಳ ತೀವ್ರ ತಪಾಸಣೆಯನ್ನು ನಡೆಸಲಾಗುತ್ತಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದವೇರಿದ ಗೂಳಿಯ ತಿವಿತಕ್ಕೆ ಪ್ರಾಣತೆತ್ತ ಬುಲ್‌ಫೈಟರ್ (ವಿಡಿಯೊ)