Select Your Language

Notifications

webdunia
webdunia
webdunia
webdunia

ಸರಿತಾ ದೇವಿಗೆ ಬಾಕ್ಸಿಂಗ್‌ನಿಂದ ನಿಷೇಧಿಸುವ ಸಾಧ್ಯತೆ

ಸರಿತಾ ದೇವಿಗೆ ಬಾಕ್ಸಿಂಗ್‌ನಿಂದ ನಿಷೇಧಿಸುವ ಸಾಧ್ಯತೆ
ನವದೆಹಲಿ , ಬುಧವಾರ, 1 ಅಕ್ಟೋಬರ್ 2014 (20:15 IST)
ಅಂತಾರಾಷ್ಟ್ರೀಯ ಬಾಕ್ಸಿಂಗ್  ಅಸೋಸಿಯೇಷನ್ ಭಾರತದ ಬಾಕ್ಸರ್ ಸರಿತಾ ದೇವಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. . 60 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದ ಸರಿತಾ ದೇವಿ ಪದಕ ಸ್ವೀಕರಿಸಲು ನಿರಾಕರಿಸಿದ್ದರು.

ಸೆಮಿಫೈನಲ್‌ನಲ್ಲಿ ತಮ್ಮ ಎದುರಾಳಿ ಸ್ಪರ್ಧಿ ವಿರುದ್ಧ ಮೇಲುಗೈ ಸಾಧಿಸಿದ್ದರೂ ತಮ್ಮ ವಿರುದ್ಧ ತೀರ್ಪು ನೀಡಿದ್ದರಿಂದಾಗಿ ಸೋಲುಂಟಾಯಿತು ಎಂದು ಸರಿತಾ ದೂರಿದ್ದರು.

ಇದಲ್ಲದೇ ಬಹುಮಾನದ ವೇದಿಕೆಯಲ್ಲಿ ಪದಕವನ್ನು ಕೊರಳಿಗೆ ಹಾಕದೇ ಕೈಯಲ್ಲಿ ಹಿಡಿದಿದ್ದರು.ಪದಕ ಪ್ರದಾನ ವೇಳೆ ಸರಿತಾ ದೇವಿ ಕಣ್ಣೀರಿಟ್ಟಿದ್ದರು ಮತ್ತು ನಂತರ ಕಂಚಿನ ಪದಕವನ್ನು ವಾಪಸ್ ನೀಡಿದ್ದರು ಮತ್ತು ದ.ಕೊರಿಯಾ ಅಂಪೈರ್ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರಿತಾ ದೇವಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸುವ ಸಾಧ್ಯತೆಯಿದೆ. 

Share this Story:

Follow Webdunia kannada