Select Your Language

Notifications

webdunia
webdunia
webdunia
webdunia

7ನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾನಿಯಾ ಮಿರ್ಜಾ

7ನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾನಿಯಾ ಮಿರ್ಜಾ
ಗಾಂಗ್‌ಜೌ(ಚೀನಾ) , ಶನಿವಾರ, 26 ಸೆಪ್ಟಂಬರ್ 2015 (20:01 IST)
ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಅವರ ವಿಶ್ವ ನಂಬರ್ ಒನ್ ತಂಡವು ಗಾಂಗ್‌ಜೌ ಔಪನ್‌ನಲ್ಲಿ  ಈ ವರ್ಷದ 6ನೇ ಪ್ರಶಸ್ತಿ ಗೆಲ್ಲುವ ಮೂಲಕ ಡಬಲ್ಸ್‌ನಲ್ಲಿ ತಮ್ಮ ಪ್ರಭುತ್ವವನ್ನು ಮೆರೆದಿದ್ದಾರೆ.

ಟಾಪ್ ಸೀಡ್‌ಗಳು ಕ್ಸು ಶಿಲಿನ್ ಮತ್ತು ಯು ಕ್ಸಿಯೋಡಿ ಅವರನ್ನು 6-3, 6-1ರಿಂದ ಫೈನಲ್ ಪಂದ್ಯದಲ್ಲಿ ಸೋಲಿಸಿ ಸತತವಾಗಿ ಎರಡನೇ ಡಬ್ಲ್ಯುಟಿಎ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.  ಆಟದಲ್ಲಿ ಅವರ ಮೇಲುಗೈ ಎಷ್ಟಿತ್ತೆಂದರೆ ಅವರು ಪ್ರಶಸ್ತಿಯ ಗುರಿಯನ್ನು ಮುಟ್ಟುವಲ್ಲಿ ಒಂದೇ ಒಂದು ಸೆಟ್ ಕಳೆದುಕೊಂಡಿಲ್ಲ. 
 
2015ನೇ ಸೀಸನ್‌ನಲ್ಲಿ ಇದು ಸಾನಿಯಾ ಅವರ ಏಳನೇ ಪ್ರಶಸ್ತಿಯಾಗಿದ್ದು, ಹಿಂಗಿಸ್ ಜತೆ 6ನೇ ಪ್ರಶಸ್ತಿಯಾಗಿದೆ. ಸಿಡ್ನಿಯಲ್ಲಿ ಬೆಥಾನಿ-ಮಾಟೆಕ್ ಸ್ಯಾಂಡ್ಸ್ ಜತೆ ಒಂದು ಟ್ರೋಫಿಯನ್ನು ಅವರು ಗೆದ್ದಿದ್ದರು.  ಸಾನಿಯಾ ಮತ್ತು ಹಿಂಗಿಸ್ ಆಡಿದ 13 ಸ್ಪರ್ಧೆಗಳಲ್ಲಿ 6 ಸ್ಪರ್ಧೆಗಳನ್ನು ಗೆದ್ದಿದ್ದಾರೆ. 
 

Share this Story:

Follow Webdunia kannada