Select Your Language

Notifications

webdunia
webdunia
webdunia
webdunia

ವಿಂಬಲ್ಡನ್ ಸೆಮಿಫೈನಲ್ ತಲುಪಿದ ಸಾನಿಯಾ-ಹಿಂಗಿಸ್ ಜೋಡಿ

ವಿಂಬಲ್ಡನ್ ಸೆಮಿಫೈನಲ್ ತಲುಪಿದ ಸಾನಿಯಾ-ಹಿಂಗಿಸ್ ಜೋಡಿ
ಲಂಡನ್ , ಗುರುವಾರ, 9 ಜುಲೈ 2015 (17:27 IST)
ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ಸೆಮಿಫೈನಲ್ಸ್ ತಲುಪುವ ಮೂಲಕ ವಿಂಬಲ್ಡ‌ನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ವಿಸ್ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಜೊತೆ  ಈ ಸಾಧನೆಯನ್ನು ಅವರು ಮಾಡಿದರು. 
 
2011ರಲ್ಲಿ ಎಲೆನಾ ವೆಸ್ನಿನಾ ಜೊತೆ ಸೆಮಿಫೈನಲ್ ಹಂತವನ್ನು ತಲುಪಿದ್ದ ಸಾನಿಯಾ,  ಮಾರ್ಟಿನಾ ಜತೆ ಬುಧವಾರ ಸೆಮೀಸ್ ಹಂತವನ್ನು ತಲುಪಿದರು. ಟಾಪ್ ಸೀಡ್‌ಗಳು ಆಸ್ಟ್ರೇಲಿಯಾ -ಕಜಕ್ 9ನೇ ಸೀಡ್ ಆಟಗಾರರಾದ ಕ್ಯಾಸಿ ಡೆಲ್ಲೆಕ್ವಾ ಮತ್ತು ಯಾರೋಸ್ಲಾವಾ ಶೆವಡೋವಾ ಅವರನ್ನು 7-5 ಮತ್ತು 6-3ರಿಂದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದರು.

ಸಾನಿಯಾ ಮತ್ತು ಮಾರ್ಟಿನಾ ಆಕ್ರಮಣಕಾರಿಯಾಗಿ ಆಟ ಆರಂಭಿಸಿ 27ರಲ್ಲಿ 20 ಸರ್ವ್ ಪಾಯಿಂಟ್‌ಗಳಲ್ಲಿ ಗೆಲವು ಗಳಿಸಿದರು. ಆದರೆ ಡೆಲ್ಲಾಕಾ-ಶ್ರೆವಡೋವಾ ಬ್ರೇಕ್ ಪಾಯಿಂಟ್ ಗೆಲ್ಲುವ ಮೂಲಕ ಚೇತರಿಸಿಕೊಂಡರು. ಆದರೆ ಟಾಪ್ ಸೀಡ್‌ಗಳು ಪ್ರಬಲರಾಗಿದ್ದು ಮೊದಲ ಸೆಟ್ಟನ್ನು 7-5ರಿಂದ ಗೆದ್ದರು. 
 
 ಎರಡನೇ ಸೆಟ್‌ನಲ್ಲಿ ಟಾಪ್ ಸೀಡ್ ಆಟಗಾರ್ತಿಯರು ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಡೆಲ್ಲಾಕ್ವಾ-ಶೆವಡೋವಾ ಡಬಲ್ ಫಾಲ್ಟ್ ಎಸಗಿದ್ದರಿಂದ ಭಾರತ-ಸ್ವಿಸ್ ಜೋಡಿ ಸೆಟ್ಟನ್ನು 6-3ರಿಂದ ಗೆದ್ದುಕೊಂಡು ಕೊನೆಯ ನಾಲ್ಕರ ಘಟ್ಟಕ್ಕೆ ಮುಟ್ಟಿದೆ. 

Share this Story:

Follow Webdunia kannada