Select Your Language

Notifications

webdunia
webdunia
webdunia
webdunia

ಪೇಸ್ ಮುಂದೆ ಸಾಕೇತ್ ಪ್ರೇಮ ನಿವೇದನೆ

ಪೇಸ್ ಮುಂದೆ ಸಾಕೇತ್ ಪ್ರೇಮ ನಿವೇದನೆ
ನವದೆಹಲಿ , ಶುಕ್ರವಾರ, 16 ಸೆಪ್ಟಂಬರ್ 2016 (08:30 IST)
ಟೆನಿಸ್ ಆಟಗಾರ ಸಾಕೇತ್ ಮೈನೇನಿ ಗುರುವಾರ ಲಿಯಾಂಡರ್ ಪೇಸ್ ಮುಂದೆ ತಮ್ಮ ಗೆಳತಿ ಲಕ್ಷ್ಮಿ ನಮೋಲ್‌ಗೆ ಪ್ರೊಪ್ರೋಸ್ ಮಾಡಿದರು.

 
ಡೇವಿಸ್ ಕಪ್ ಔತಣ ಕೂಟದ ಸಂದರ್ಭದಲ್ಲಿ ಗೆಳತಿ ಲಕ್ಷ್ಮಿ ಅವರಿಗೆ ತಮ್ಮ ಜೀವನಸಂಗಾತಿಯಾಗುತ್ತೀಯಾ ಎಂದು ಅವರು ಪ್ರೇಮ ನಿವೇದನೆ ಮಾಡಿಕೊಂಡ ಪರಿ ವಿಭಿನ್ನವಾಗಿತ್ತು. ನಾಚುತ್ತಲೇ ಲಕ್ಷ್ಮಿ ಅವರಿತ್ತ ಕೆಂಪುಗುಲಾಬಿಯನ್ನು ಸ್ವೀಕರಿಸಿದರು. 
 
ಸಭಾಂಗಣದಲ್ಲಿ ನೆರೆದಿದ್ದ ಭಾರತ ತಂಡದ ಎಲ್ಲ ಸದಸ್ಯರು ಜೋಡಿಗೆ ಶುಭ ಕೋರಿದರು. ಬಳಿಕ ಇಬ್ಬರು ಕೇಕ್ ಕತ್ತರಿಸಿ ಸಂಭ್ರಮಿಸಿದರು. 
webdunia
ಸಾಕೇತ್ ಲಕ್ಷ್ಮಿಗೆ ಪ್ರೇಮ ನಿವೇದನೆ ಮಾಡಿಕೊಂಡ ಫೋಟೋವನ್ನು ಪೇಸ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. 
 
ಶುಕ್ರವಾರದಿಂದ ಭಾರತ- ಸ್ಪೇನ್ ನಡುವೆ ಡೇವಿಸ್ ಕಪ್ ಟೂರ್ನಿ ನಡೆಯಲಿದ್ದು ಸಾಕೇತ್ ಪುರುಷರ ಸಿಂಗಲ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕ ವಿರಾಟ್ ಕೊಹ್ಲಿ ತಂಡದ ಕ್ರಿಕೆಟಿಗರಿಗೆ ಸ್ಪೂರ್ತಿ: ಕೆ.ಎಲ್.ರಾಹುಲ್