Webdunia - Bharat's app for daily news and videos

Install App

ಒಲಿಂಪಿಕ್ ಗ್ರಾಮದಲ್ಲಿ ಬೀಡುಬಿಟ್ಟಿರುವ ಭಾರತದ ಕ್ರೀಡಾಳುಗಳ ತಂಡ

Webdunia
ಶನಿವಾರ, 30 ಜುಲೈ 2016 (17:45 IST)
ಮುಂದಿನ ವಾರ ಬಹು ನಿರೀಕ್ಷಿತ ಒಲಿಂಪಿಕ್ ಕ್ರೀಡಾಕೂಟ ಆರಂಭವಾಗಲಿದ್ದು, ಭಾರತ ತಂಡದ ಸ್ಪರ್ಧಾಳುಗಳು ರಿಯೋ ಒಲಿಂಪಿಕ್ ಗ್ರಾಮಕ್ಕೆ ಬರಲಾರಂಭಿಸಿದ್ದಾರೆ.  ಆಗಸ್ಟ್ 5ರಂದು ಒಲಿಂಪಿಕ್ ಉದ್ಘಾಟನೆಯಾಗಲಿದ್ದು, ಈಗಾಗಲೇ ಭಾರತ ತಂಡದ ಅರ್ಧದಷ್ಟು ಮಂದಿ ರಿಯೊಗೆ ಆಗಮಿಸಿದ್ದು, ಎರಡು ಹಾಕಿ ತಂಡಗಳು ಈಗಾಗಲೇ ರಿಯೋದಲ್ಲಿ ಬೀಡುಬಿಟ್ಟಿವೆ.
 
ಭಾರತ ತಂಡದ ಅಧಿಕೃತ ಸ್ವಾಗತ ಸಮಾರಂಭ ಆಗಸ್ಟ್ 2ರಂದು ಮಧ್ಯಾಹ್ನ ನಡೆಯಲಿದೆ. ಸ್ವಾಗತ ಸಮಾರಂಭವು ಅಧಿಕೃತವಾಗಿದ್ದು ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಇದೊಂದು ತಂಡದ ಬೆಸುಗೆಯ ಕಾರ್ಯಕ್ರಮ ಎಂದು ಭಾರತ ತಂಡದ ಉಸ್ತುವಾರಿ ರಾಕೇಶ್ ಗುಪ್ತಾ ತಿಳಿಸಿದ್ದಾರೆ.
 
 ಬಿಲ್ಲುಗಾರಿಕೆ ತಂಡವು ರಿಯೊದಲ್ಲಿ ಮೊದಲಿಗೆ ಆಗಮಿಸಿದ್ದು, ಉಳಿದವು ಅಥ್ಲೆಟಿಕ್ಸ್ ತಂಡ, ಬಾಕ್ಸರುಗಳು ಮತ್ತು ಶೂಟರ್‌ಗಳು ನಂತರ ಆಗಮಿಸಿದ್ದಾರೆ. ಒಂದೆರಡು ದಿನಗಳ ಮುಂಚೆ ಆಗಮಿಸಿದ್ದ ಇತರೆ ಶೂಟರ್‌ಗಳನ್ನು  2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಸೇರಿಕೊಂಡರು.
 
 ಭಾರತ ತಂಡದ ಸದಸ್ಯರು ಒಲಿಂಪಿಕ್ ಗ್ರಾಮಕ್ಕೆ ಮತ್ತು ಅಲ್ಲಿನ ವಿವಿಧ ಚಟುವಟಿಕೆಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಅನೇಕ ಅಥ್ಲೀಟ್‌ಗಳು ತರಬೇತಿ ಬಳಿಕ ಪ್ಲಾಜಾ ಮತ್ತು ವರ್ಚುಯಲ್ ರಿಯಾಲಿಟಿ ವ್ಯವಸ್ಥೆಯಲ್ಲಿ  ಮನರಂಜನೆ ಪಡೆಯುತ್ತಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

MI vs RR Match:35ಎಸೆತದಲ್ಲಿ ಶತಕ ಸಿಡಿಸಿ ಮೋಡಿ ಮಾಡಿದ್ದ ವೈಭವ್ ಸೂರ್ಯವಂಶಿ ಇಂದು ಕಳಿಸಿದ್ದು ಸೊನ್ನೆ

RR vs MI Match: ಟಾಸ್‌ ಗೆದ್ದ ರಾಜಸ್ಥಾನ್‌, ಫೀಲ್ಡಿಂಗ್ ಆಯ್ಕೆ

Vignesh Puthur, ಮುಂಬೈ ತಂಡಕ್ಕೆ ಆಘಾತ; ಉದಯೋನ್ಮುಖ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರು ಟೂರ್ನಿಯಿಂದ ಔಟ್‌

IPL 2025: ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿರುವ ಪಂಜಾಬ್‌ಗೆ ಬಿಗ್ ಶಾಕ್‌

ಟೂರ್ನಿಯಿಂದ ಚೆನ್ನೈ ತಂಡ ಹೊರಬೀಳುತ್ತಿದ್ದಂತೆ ಮುಂದಿನ ಐಪಿಎಲ್‌ ಆಡುವ ಬಗ್ಗೆ ಧೋನಿ ಹೇಳಿದ್ದೇನು

ಮುಂದಿನ ಸುದ್ದಿ
Show comments