Select Your Language

Notifications

webdunia
webdunia
webdunia
webdunia

ರಿಚಮಂಡ್‌‌ ಓಪನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ

ರಿಚಮಂಡ್‌‌ ಓಪನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ
, ಸೋಮವಾರ, 21 ಏಪ್ರಿಲ್ 2014 (11:00 IST)
ರಿಚಮಂಡ್‌‌( ಅಮೆರಿಕಾ) : 10 ಸಾವಿರ ಡಾಲರ್ ಮೊತ್ತದ ಬಹುಮಾನವುಳ್ಳ ರಿಚಮಂಡ್‌‌ ಓಪನ್‌ ಸ್ಕ್ವಾಶ್‌‌ ಟೂರ್ನಮೆಂಟ್‌‌‌‌‌‌ನಲ್ಲಿ ಭಾತದ ಜೋಶ್ನಾ ಚಿನಪ್ಪಾ ತಮ್ಮ ಎದುರಾಳಿಯಾಏಧ ಆಸ್ಟ್ರೇಲಿಯಾದ ಮಾಜಿ ವಿಶ್ವ ಚಾಂಪಿಯನ್‌‌ಶಿಪ್‌‌ ರೆಚೆಲ್‌‌ ಗ್ರಿನಹೈಮ್‌‌ ವಿರುದ್ದ ಗೆಲುವನ್ನು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. 
 
ವಿಶ್ವದ 21ನೇ ಶ್ರೇಯಾಂಕಿತ ಆಟಗಾರ್ತಿ ಜೋಶನಾ ತಮ್ಮ ಎದುರಾಳಿಯಾದ 16 ಶ್ರೇಯಾಂಕಿತ ರೆಚೆಲ್‌‌ರನ್ನು ನೇರ ಸೆಟ್‌‌‌ಗಳಲ್ಲಿ 11-9, 11-5, 11-8 ಅಂತರದಿಂದ ಸೋಲಿಸಿದ್ದಾರೆ. ರೆಚೆಲ್‌ ವಿರುದ್ದ ನಡೆದ ಆರು ಪಂದ್ಯಗಳಲ್ಲಿ ಜೊಶನಾಗೆ ಇದು ಮೊದಲ ಗೆಲುವಾಗಿದೆ. 
 
ಕಳೆದ ವಾರ ನಡೆದ ಟೊಕ್ಸಾಸ ಓಪನ್‌‌ನನ್ಲಿ ಜೋಶನಾ ತಮ್ಮ ಈ ಎದುರಾಳಿಯಾದ 37 ವರ್ಷದ ಆಸ್ಟ್ರೇಲಿಯಾದ ರೆಚೆಲ್‌‌‌ರಿಂದ ಕೇವಲ 24 ನಿಮಿಷದಲ್ಲಿ ಸೋಲನ್ನು ಸೋತಿದ್ದರು, ಆದರೆ ಈ ಗೆಲುವಿನ ಮೂಲಕ ತಮ್ಮ ಸೇಡು ತೀರಿಸಿಕೊಂಡಿದ್ದಾರೆ.

Share this Story:

Follow Webdunia kannada