ವಿಶ್ವ ನಂ 1 ಕಾರ್ಲ್ಸನ್ ಗೆ ಸೋಲುಣಿಸಿದ ಅಣ್ಣ ಆರ್ ಪ್ರಜ್ಞಾನಂದ, ಮಹಿಳೆಯರ ವಿಭಾಗದಲ್ಲಿ ತಂಗಿ ವೈಶಾಲಿ ನಂ 1

Krishnaveni K
ಗುರುವಾರ, 30 ಮೇ 2024 (09:25 IST)
Photo Credit: X
ನವದೆಹಲಿ: ಭಾರತದ ಆರ್ ಪ್ರಜ್ಞಾನಂದ ಮತ್ತೊಮ್ಮೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ ವಿಶ್ವ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಮಣಿಸಿದ್ದಾರೆ.

ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ಗೇಮ್ ನ ಮೂರನೇ ಸುತ್ತಿನಲ್ಲಿ ಕಾರ್ಲ್ಸನ್ ವಿರುದ್ಧ ಗೆದ್ದ ಪ್ರಜ್ಞಾನಂದ ಮತ್ತೊಮ್ಮೆ ಅಪ್ರತಿಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಅಝರ್ ಬೈಜಾನ್ ನ ಬಾಕುವಿನಲ್ಲಿ ನಡೆದಿದ್ದ ಚೆಸ್ ವಿಶ್ವಕಪ್ ನಲ್ಲಿ ಪ್ರಜ್ಞಾನಂದ ವಿರುದ್ಧ ಗೆದ್ದ ಕಾರ್ಲ್ಸನ್ ಮೊದಲ ಬಾರಿಗೆ ವಿಶ್ವಚಾಂಪಿಯನ್ ಆಗುವ ಪ್ರಜ್ಞಾನಂದಗೆ ನಿರಾಸೆ ತಂದಿದ್ದರು.

ಇದೀಗ ಅದೇ ಕಾರ್ಲ್ಸನ್ ಗೆ ಸೋಲುಣಿಸಿ ಸೇಡು ತೀರಿಸಿಕೊಂಡಿದ್ದಾರೆ. ಇದೀಗ ಮೊದಲ ಗೆಲುವಿನೊಂದಿಗೆ ಪ್ರಜ್ಞಾನಂದ 5.5 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕಾರ್ಲ್ಸನ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿಶೇಷವೆಂದರೆ ಅಣ್ಣ ಪ್ರಜ್ಞಾನಂದ ಜೊತೆಗೆ ಅವರ ಸಹೋದರಿ ವೈಶಾಲಿ ಕೂಡಾ ಮಹಿಳೆಯರ ವಿಭಾಗದಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ವೈಶಾಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಕೊನೆರು ಹಂಪಿಯನ್ನು ಸೋಲಿಸಿದರೆ, ಜಿಎಂ ಅನ್ನಾ ಮುಜಿಚುಕ್ ಅವರ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಣ್ಣ-ತಂಗಿ ಜೋಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಸ್ಪಿನ್ನರ್ ಗಳಿಂದ ಬಚಾವ್ ಆದ ಟೀಂ ಇಂಡಿಯಾ

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ಮುಂದಿನ ಸುದ್ದಿ
Show comments