Select Your Language

Notifications

webdunia
webdunia
webdunia
webdunia

ಸತತ ಎರಡನೇ ಸೂಪರ್ ಸೀರೀಸ್ ಗೆಲ್ಲುವ ಪಿ ವಿ ಸಿಂಧು ಕನಸು ನನಸಾಗಲಿಲ್ಲ

ಸತತ ಎರಡನೇ ಸೂಪರ್ ಸೀರೀಸ್ ಗೆಲ್ಲುವ ಪಿ ವಿ ಸಿಂಧು ಕನಸು ನನಸಾಗಲಿಲ್ಲ
Hong Kong , ಭಾನುವಾರ, 27 ನವೆಂಬರ್ 2016 (19:07 IST)
ಹಾಂಗ್ ಕಾಂಗ್: ಚೀನಾ ಓಪನ್ ಗೆದ್ದ ಹುಮ್ಮಸ್ಸಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾಂಗ್ ಕಾಂಗ್ ಓಪನ್ ಗೆಲ್ಲುವ ಮೂಲಕ ಸತತ ಎರಡನೇ ಸೂಪರ್ ಸೀರೀಸ್ ಗೆಲ್ಲುವ ಕನಸು ಕಂಡಿದ್ದರು. ಆದರೆ ಅದು ನನಸಾಗಲಿಲ್ಲ.

ಇಂದು ನಡೆದ ಫೈನಲ್ ಪಂದ್ಯದಲ್ಲಿ ಸಿಂಧು  ತ್ಸು ಯಿಂಗ್ ಎದುರು 15-21, 17-21 ಅಂತರದಿಂದ ಸೋಲುವ ಮೂಲಕ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದರು. ಫೈನಲ್ ಹೋರಾಟ 41 ನಿಮಿಷಗಳಲ್ಲಿ ಕೊನೆಗೊಂಡಿತ್ತು.

ಹಾಗೆ ನೋಡಿದರೆ ಈ ಪಂದ್ಯದಲ್ಲಿ ಸಿಂಧು ಕಮಾಲ್ ನಡೆಯಲಿಲ್ಲ. ಕಳೆದ ಪಂದ್ಯಗಳಂತೆ ಸಿಂಧು ಈ ಪಂದ್ಯದಲ್ಲಿ ಹೋರಾಟ ತೋರಿಸಲಿಲ್ಲ. ಬೇಗನೇ ಎದುರಾಳಿಗೆ ಶರಣಾದರು. ಈ ಮೂಲಕ ಸತತ ಎರಡು ಸೂಪರ್ ಸೀರೀಸ್ ಗೆಲ್ಲುವ ಅವಕಾಶ ತಪ್ಪಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಾಲಿ ಟೆಸ್ಟ್ ಪಂದ್ಯ: ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾಗೆ ನಾಯಕನ ಚಪ್ಪಾಳೆಯ ಸ್ವಾಗತ