Select Your Language

Notifications

webdunia
webdunia
webdunia
webdunia

ಮೋದಿಗೆ ಕ್ರೀಡೆಯ ಜ್ಞಾನ ಕುರಿತು ಅಚ್ಚರಿಗೊಂಡ ಸೈನಾ

ಮೋದಿಗೆ ಕ್ರೀಡೆಯ ಜ್ಞಾನ ಕುರಿತು ಅಚ್ಚರಿಗೊಂಡ ಸೈನಾ
ನವದೆಹಲಿ , ಶುಕ್ರವಾರ, 18 ಸೆಪ್ಟಂಬರ್ 2015 (17:33 IST)
ಪ್ರಧಾನಿ  ನರೇಂದ್ರ ಮೋದಿ ಅವರು ಕ್ರೀಡೆಗಳ ಬಗ್ಗೆ ಹೊಂದಿರುವ ಜ್ಞಾನಕ್ಕೆ ಸ್ಟಾರ್  ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ಅವರ 65ನೇ ಜನ್ಮದಿನದ ಶುಭಾಶಯ ಹೇಳಲು ಭೇಟಿ ಮಾಡಿದಾಗ ತಾವು ಅವರ ಕುಟುಂಬದ ಸದಸ್ಯರೆಂಬ ಭಾವನೆ ಉಂಟುಮಾಡಿದರೆಂದು ಸೈನಾ ತಿಳಿಸಿದ್ದಾರೆ.
 
ಅರ್ಧ ಗಂಟೆ ಕಾಲ ನಡೆದ ಸಭೆಯಲ್ಲಿ ಪ್ರಧಾನಿಗೆ ನನ್ನ ಕುಟುಂಬದ ಬಗ್ಗೆ ಮತ್ತು ಬ್ಯಾಡ್ಮಿಂಟನ್ ಆಟದ ಬಗ್ಗೆ ತಿಳಿದಿರುವ ಜ್ಞಾನ ಕಂಡು ಅಚ್ಚರಿಯಾಯಿತು ಎಂದು ಸೈನಾ ಮೋದಿ ಅವರ ಜನ್ಮದಿನದ ಪ್ರಯುಕ್ತ ಅವರಿಗೆ ಬ್ಯಾಡ್ಮಿಂಟನ್ ಬ್ಯಾಟ್ ಉಡುಗೊರೆಯಾಗಿ ನೀಡುವಾಗ ಸೈನಾ ಹೇಳಿದರು. 
 
 ಕುಟುಂಬದಲ್ಲಿ ಮಕ್ಕಳು ಕ್ರೀಡೆಯನ್ನು ಒಂದು ವೃತ್ತಿಯಾಗಿ ತೆಗೆದುಕೊಳ್ಳುವಲ್ಲಿ ಕುಟುಂಬದ ಪಾತ್ರಕ್ಕೆ ಮೋದಿ ಮಹತ್ವ ನೀಡಿದರು. ಕ್ರೀಡೆ ಜತೆ ಸಂಬಂಧಿಸಿದ ಉದ್ಯಮ ಮತ್ತು ಉದ್ಯೋಗಗಳ ಪಾತ್ರ ಕುರಿತು ಮೋದಿ ಮಾತನಾಡಿದರು.  ಮೋದಿಗೆ ತಾವು ರಿಯೋ ಒಲಿಂಪಿಕ್ಸ್‌ಗೆ ಮುಂದಿನ ವರ್ಷ ಭೇಟಿ ನೀಡಬೇಕೆಂದು ಆಹ್ವಾನಿಸಿದೆ.  ಮೋದಿ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ ಬಗ್ಗೆ ಚರ್ಚಿಸಿದರೆಂದು ಸೈನಾ ಹೇಳಿದರು. 
 

Share this Story:

Follow Webdunia kannada