Webdunia - Bharat's app for daily news and videos

Install App

ಪುಟ್ಬಾಲ್ ಲೆಜೆಂಡ್ ಪೀಲೆ ಪದಕ, ಟ್ರೋಫಿ 5 ದಶಲಕ್ಷ ಡಾಲರ್‌ಗೆ ಹರಾಜು

Webdunia
ಶುಕ್ರವಾರ, 10 ಜೂನ್ 2016 (18:20 IST)
ಫುಟ್ಬಾಲ್ ದಂತಕತೆ ಪೀಲೆ  ಬಳಿಯಿದ್ದ ಪದಕ, ಟ್ರೋಫಿ ಮುಂತಾದ ಅಮೂಲ್ಯ ವಸ್ತುಗಳ ಹರಾಜು ಪ್ರಕ್ರಿಯೆ  ಲಂಡನ್‌ನಲ್ಲಿ ಮುಗಿದಿದ್ದು,  ಅವರ ಅಮೂಲ್ಯ ವಸ್ತುಗಳು ಒಟ್ಟು  5 ದಶಲಕ್ಷ ಡಾಲರ್ ಹಣಕ್ಕೆ ಹರಾಜಾಗಿವೆ.

ಲಂಡನ್‌ನಲ್ಲಿ ನಡೆದ ಅಂತಿಮ ದಿನದ ಮಾರಾಟವು ಲಾಸ್ ಏಂಜಲಿಸ್ ಮೂಲದ ಹರಾಜು ಮನೆ ಜೂಲಿಯನ್ಸ್‌ ಉಸ್ತುವಾರಿಯಲ್ಲಿ ನಡೆದಿದ್ದು, 75 ವರ್ಷದ ಬ್ರೆಜಿಲ್ ಆಟಗಾರನ 1970ರ ಮೂರನೇ ಮತ್ತು ಅಂತಿಮ ವಿಶ್ವಕಪ್ ವಿಜೇತ ಪದಕಗಳು 346,000 ಪೌಂಡುಗಳಿಗೆ ಬಿಕರಿಯಾಗಿವೆ. 
 
ಜೂಲಿಯನ್ಸ್ ಒಟ್ಟು ಮೂಲ ದರದ ಅಂದಾಜನ್ನು  3 ದಶಲಕ್ಷ ಡಾಲರ್‌ಗೆ ಇರಿಸಿದ್ದು, ಅದಕ್ಕಿಂತ ಹೆಚ್ಚು ಹಣಕ್ಕೆ ಬಿಕರಿಯಾಗಿರುವುದರಿಂದ ಸಂತಸಗೊಂಡಿದೆ.  ಗುರುವಾರ ಮಾರಾಟವಾದ ಪೀಲೆಯವರ ಇನ್ನೊಂದು ವಸ್ತು 1000ನೇ ಗೋಲು ಬಾರಿಸಿದ್ದಕ್ಕೆ ಸಿಕ್ಕ ಪುರಸ್ಕಾರ. ಇದು 162,000 ಪೌಂಡ್‌ಗಳಿಗೆ ಬಿಕರಿಯಾಯಿತು. ಪೀಲೆ ಅವರ ಮೂರನೇ ವಿಶ್ವಕಪ್ ಯಶಸ್ಸಿನ ಬಳಿಕ ಜೂಲ್ಸ್ ರಿಮೆಟ್ ಟ್ರೋಫಿಯ ಪ್ರತಿರೂಪಕ್ಕೆ 395,000 ಪೌಂಡ್ ಹಣ ಸಿಕ್ಕಿದೆ. ಸ್ವಿಸ್ ವಾಚ್ ತಯಾರಿಕೆ ದೈತ್ಯ ಕಂಪನಿ ಹಬ್ಲೋಟ್ ಅದನ್ನು ಹರಾಜಿನಲ್ಲಿ ಖರೀದಿಸಿತು.
 
ಈ ಹರಾಜಿನಲ್ಲಿ  ಬಂದ ಹಣದ ಭಾಗವನ್ನು ಪೀಲೆಗೆ ಆತ್ಮೀಯವಾಗಿದ್ದ ಬ್ರೆಜಿಲ್ ಅತೀ ದೊಡ್ಡ ಮಕ್ಕಳಾಸ್ಪತ್ರೆ ಪೆಕ್ವಿನ್ ಪ್ರಿನ್ಸಿಪ್ ನೆರವಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೊಂದು ವಿವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ, ಜಾಗಕ್ಕಾಗಿ ನೆರೆಹೊರೆಯರ ಜತೆ ಗುದ್ದಾಟ

IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮುಂದಿನ ಸುದ್ದಿ
Show comments