Select Your Language

Notifications

webdunia
webdunia
webdunia
webdunia

ಪಯಸ್, ಹಿಂಗಿಸ್ ಜೋಡಿ ವಿಂಬಲ್ಡನ್ ಮಿಶ್ರಿತ ಡಬಲ್ಸ್ ಸೆಮಿಫೈನಲ್ ಪ್ರವೇಶ

ಪಯಸ್, ಹಿಂಗಿಸ್ ಜೋಡಿ  ವಿಂಬಲ್ಡನ್ ಮಿಶ್ರಿತ ಡಬಲ್ಸ್ ಸೆಮಿಫೈನಲ್ ಪ್ರವೇಶ
ಲಂಡನ್ , ಶುಕ್ರವಾರ, 10 ಜುಲೈ 2015 (13:33 IST)
ಭಾರತದ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಸ್ವಿಸ್ ಹಿರಿಯ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜೋಡಿ  ವಿಂಬಲ್ಡನ್‌ನಲ್ಲಿ ಗುರುವಾರ ತಮ್ಮ ಎದುರಾಳಿಗಳನ್ನು ಸೋಲಿಸಿ ಮಿಶ್ರಿತ ಡಬಲ್ಸ್ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ. ರೋಹನ್ ಬೋಪಣ್ಣ ಮತ್ತು ಅವರ ರೊಮೇನಿಯಾ ಜೋಡಿ ಫ್ಲೋರಿನ್ ಮರ್ಜಿಯಾ  3 ಗಂಟೆ 23 ನಿಮಿಷಗಳ ಕಾಲ ಹೋರಾಟ ಮಾಡಿ ತರುವಾಯ  ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸೋಲಪ್ಪಿದರು. 
 
 7ನೇ ಸೀಡ್ ಪಯಸ್ ಮತ್ತು ಹಿಂಗಿಸ್ ಅವರು ವೃತ್ತಿಪರ ಪ್ರದರ್ಶನ ನೀಡಿ ಪೋಲಿಷ್ ರಷ್ಯನ್ ಮೂರನೇ ಸೀಡ್ ಮಾರ್ಸಿನ್ ಮಾಟ್ಕೋವ್‌ಸ್ಕಿ ಮತ್ತು ಎಲೆನಾ ವೆಸ್ನಿನಾ ಅವರನ್ನು 6-2 ಮತ್ತು 6-1ರಿಂದ ಸೋಲಿಸಿದರು. ಪಯಸ್ ಮತ್ತು ಹಿಂಗಿಸ್ ಎಲ್ಲಾ ಬ್ರೇಕ್ ಪಾಯಿಂಟ್ ಅವಕಾಶಗಳನ್ನು ಬಳಸಿಕೊಂಡು 76ರಲ್ಲಿ 49 ಪಾಯಿಂಟ್ ಕಬಳಿಸಿದರು.

ಮುಂದಿನ ಪಂದ್ಯದಲ್ಲಿ ಅಮೆರಿಕದ ಅಗ್ರ ಶ್ರೇಯಾಂಕಿತರಾದ ಮೈಕ್ ಬ್ರಯನ್ ಮತ್ತು ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಅವರನ್ನು ಫೈನಲ್ ಪ್ರವೇಶಕ್ಕಾಗಿ ಎದುರಿಸಲಿದ್ದಾರೆ. ಇದಕ್ಕೆ ಮುಂಚೆ 9ನೇ ಸೀಡ್ ಬೋಪಣ್ಣ ಮತ್ತು ಮರ್ಜಿಯಾ ತಮ್ಮ ಚೊಚ್ಚಲ ಫೈನಲ್ ಅಂಚಿನಲ್ಲಿ ಡಚ್ ರೊಮಾನಿಯಾ ನಾಲ್ಕನೇ ಸೀಡ್ ಜೀನ್ ಜೂಲಿಯನ್ ರೋಜರ್ ಮತ್ತು ಹೊರಿಯಾ ಟೆಕಾಯುವುಗೆ 6-4. 2-6, 3-6, 6-4 ಮತ್ತು 121-13 ಸೆಟ್‌ಗಳಿಂದ ಸೋತರು. 
 

Share this Story:

Follow Webdunia kannada